ನಕಲಿ ಔಷಧ ತಯಾರಿ ಆರೋಪ: 18 ಫಾರ್ಮಾ ಕಂಪನಿಗಳ ಪರವಾನಗಿ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನಕಲಿ ಔಷಧ (Spurious medicines) ತಯಾರಿಸುತ್ತಿದ್ದ ಆರೋಪದ ಮೇಲೆ 18 ಫಾರ್ಮಾ ಕಂಪನಿಗಳ (Pharma Companies) ಪರವಾನಗಿಯನ್ನು ಔಷಧ ನಿಯಂತ್ರಣ ಇಲಾಖೆ (DCGI) ರದ್ದುಗೊಳಿಸಿದೆ.

20 ರಾಜ್ಯಗಳಲ್ಲಿರುವ 76 ಕಂಪನಿಗಳ ಮೇಲೆ ತಪಾಸಣೆ ಬಳಿಕ ಇಲಾಖೆ ಈ ಕ್ರಮವನ್ನು ಕೈಗೊಂಡಿದೆ
ಹಿಮಾಚಲ ಪ್ರದೇಶದ (Himachal Pradesh) 70, ಉತ್ತರಾಖಂಡ್‍ನ (Uttarakhand) 45 ಮತ್ತು ಮಧ್ಯಪ್ರದೇಶದ 23 ಕಂಪನಿಗಳ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಡೆಹ್ರಾಡೂನ್‍ನಲ್ಲಿ ನೋಂದಾಯಿಸಲಾದ ಹಿಮಾಲಯ ಮೆಡಿಟೆಕ್ ಪ್ರೈವೇಟ್ ಲಿಮಿಟೆಡ್‍ನ ಪರವಾನಗಿಯನ್ನು 2022ರ ಡಿ.30 ರಂದು ಅಮಾನತುಗೊಳಿಸಲಾಗಿತ್ತು. 12 ಉತ್ಪನ್ನಗಳನ್ನು ತಯಾರಿಸಲು ನೀಡಿದ್ದ ಅನುಮತಿಯನ್ನು 2023ರ ಫೆ.7 ರಂದು ರದ್ದುಗೊಳಿಸಲಾಗಿತ್ತು.

ಈ ಹಿಂದೆ ಹಿಮಾಚಲ ಪ್ರದೇಶದ ಶ್ರೀ ಸಾಯಿ ಬಾಲಾಜಿ ಕಂಪನಿಗೆ ಶೋಕಾಸ್ ನೋಟಿಸ್ ನೀಡಿ, ಔಷಧಗಳ ತಯಾರಿಕೆ ನಿಲ್ಲಿಸುವಂತೆ ಸೂಚಿಸಲಾಗಿತ್ತು. ಪರಿಶೀಲನೆಯ ನಂತರ ಹಿಂದಿನ ಆದೇಶವನ್ನು ರದ್ದುಗೊಳಿಸಲಾಗಿತ್ತು.

ಇಜಿ ಫಾರ್ಮಾಸ್ಯುಟಿಕಲ್ಸ್, ವಿಲ್ ಮಂಡಲ, ತೆಹ್ ಕಸೌಲಿ, ಡಿಸ್ಟ್ ಸೋಲನ್ ಸಂಸ್ಥೆಗಳಿಗೂ ನೋಟಿಸ್ ನೀಡಲಾಗಿತ್ತು. ಪರಿಶೀಲನೆಯ ನಂತರ ಉತ್ಪಾದನೆ ನಿಷೇಧಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಅಥೆನ್ಸ್ ಲೈಫ್ ಸೈನ್ಸಸ್ ಕಂಪನಿಗೂ ಸಹ ಎಚ್ಚರಿಕೆಯನ್ನು ನೀಡಲಾಗಿತ್ತು.

ಹಿಮಾಚಲದ ಸೋಲನ್‍ನ ಜಿಎನ್‍ಬಿ ಮೆಡಿಕಾ ಲ್ಯಾಬ್‍ಗೆ ಮಾತ್ರೆಗಳು, ಕ್ಯಾಪ್ಸುಲ್‍ಗಳು, ಕೆಮ್ಮಿನ ಔಷಧಿಗಳು, ಚುಚ್ಚುಮದ್ದು ಮತ್ತು ಪ್ರೋಟಿನ್ ಪೌಡರ್ ಉತ್ಪಾದನೆಯನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ.

ಫರಿದಾಬಾದ್‍ನಲ್ಲಿ ನೋಂದಾಯಿಸಲಾದ ನೆಸ್ಟರ್ ಕಂಪನಿಗೆ ಜ.30 ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಪರಿಶೀಲನೆ ನಡೆಸಿದ ನಂತರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯಿದೆಯ ಅಡಿಯಲ್ಲಿ ರೂಪಿಸಲಾದ ನಿಯಮಗಳನ್ನು ಅನುಸರಿಸಲು ಎಚ್ಚರಿಕೆ ನೀಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!