ನಿವೇಶನ ಹಂಚಿಕೆಯಲ್ಲಿ ಅಕ್ರಮ ಆರೋಪ: ಸಚಿವ ಎಂ.ಬಿ.ಪಾಟೀಲ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ನನ್ನ ವಿರುದ್ಧ ನೀಡಿರುವ ದೂರು ತುಂಬಾ ಹಳೆಯದು. ದಿನಾಂಕ ಬದಲಿಸಿ ನನ್ನ ವಿರುದ್ಧ ಈಗ ಮತ್ತೊಂದು ದೂರು ನೀಡಿದ್ದಾರೆ. ಈ ಸಂಬಂಧ ಈ ಹಿಂದೆಯೇ ರಾಜ್ಯಪಾಲರಿಗೆ ಉತ್ತರ ನೀಡಿದ್ದೇನೆ ಎಂದು ಕೈಗಾರಿಕಾ ಇಲಾಖೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಕೆಐಎಡಿಬಿ ಮೂಲೆ ನಿವೇಶನ ಹಂಚಿಕೆಯಲ್ಲಿ ಅಕ್ರಮವೆಸಗಿದ ಆರೋಪ ಹಿನ್ನೆಲೆ ಮಾತನಾಡಿದ ಅವರು, ಮೂಲೆ ನಿವೇಶನ ಹಂಚಿಕೆಯಲ್ಲಿ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ.

ನಾನು ಕೈಗಾರಿಕೆ ಸಚಿವರಾದ ಮೇಲೆ ಯಾವುದೇ ಬದಲಾವಣೆ ಮಾಡಿಲ್ಲ. ಎಲ್ಲಾ ನಿಯಮಗಳನ್ನು ಈ ಹಿಂದಿನ ಸರ್ಕಾರವೇ ರೂಪಿಸಿತ್ತು. ನಿಯಮದಂತೆ ಕೆಐಎಡಿಬಿ ಮೂಲೆ ನಿವೇಶನ ಹಂಚಿಕೆ ಮಾಡಲಾಗಿದೆ. ರಾಜ್ಯಪಾಲರು ನೋಟಿಸ್ ನೀಡಿದರೆ ನಾನು ಉತ್ತರ ಕೊಡುತ್ತೇನೆ ಎಂದಿದ್ದಾರೆ.

ವಾಣಿಜ್ಯ ಇಲಾಖೆಯಲ್ಲಿ ಹರಾಜು ಹಾಕುವ ಪದ್ಧತಿ ಇಲ್ಲ. ವಾಣಿಜ್ಯ ನಿವೇಶನಗಳನ್ನು ಮಾತ್ರ ಹರಾಜು ಹಾಕಲಾಗುತ್ತೆ. ಈ ಬಗ್ಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದೇವೆ. ಪಾರದರ್ಶಕವಾಗಿ ಕೆಐಎಡಿಬಿ ಮೂಲೆ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.

377 ಎಕರೆ ಪ್ರದೇಶದ 193 ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದರಲ್ಲಿ 43 ನಿವೇಶನಗಳಿಗೆ 96 ಎಕರೆ ಪ್ರದೇಶ ಅಷ್ಟೇ ಹಂಚಲಾಗಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿ ರಾಜ್ಯದ ಹಲವೆಡೆ ಶೇ.25ರಷ್ಟು ಎಕರೆ ಪ್ರದೇಶದ ನಿವೇಶನ ಮಾತ್ರ ಹಂಚಿಕೆ ಮಾಡಲಾಗಿದೆ. 41 ಸಿಂಗಲ್ ಸೈಟ್‌ ಅರ್ಜಿ ಪರಿಗಣಿಸಿಲ್ಲ, ಹೀಗಾಗಿ ಇದು ಟೆಂಡರ್ ಪ್ರಕ್ರಿಯೆಯಲ್ಲ. 2019ರಲ್ಲಿ ಹಂಚಿಕೆಗೆ ಒಂದೂವರೆ ಪಟ್ಟು ಹೆಚ್ಚಿಗೆ ದರ ಇರಬೇಕು ಅಂತಾ ಇತ್ತು. ಆದರೆ ಕೇವಲ ಒಂದು ಪಟ್ಟು ಹಂಚಿಕೆಯಾಗಬೇಕೆಂಬ ನಿರ್ಧಾರ ಮಾಡಲಾಗಿತ್ತು ಎಂದಿದ್ದಾರೆ.

2021ರ ಜೂನ್‌ 7ರ ಹೊಸ ನಿಯಮದಂತೆ ಒಂದು ಪಟ್ಟು ಹಂಚಿಕೆಯಾಗಿದೆ. ಈ ಬಗ್ಗೆ ಏನೂ ತಿಳಿದುಕೊಳ್ಳದೆ ಆರೋಪ ಮಾಡಿದರೆ ಹೇಗೆ? ದೂರುದಾರರಿಗೆ ಯಾವುದೇ ಮಾಹಿತಿ ಇಲ್ಲ, ನಿಯಮದಂತೆ ಹಂಚಿಕೆ ಮಾಡಿದ್ದೇವೆ. ನಾನು ಸಚಿವರಾದ ಮೇಲೆ ಎಸ್​​ಎಸಿ-ಎಸ್​​ಟಿಗೆ ಕೊಟ್ಟಿದ್ದೇವೆ, ಆನ್‌ಲೈನ್‌ ಮಾಡಿದ್ದೇನೆ. 2-3 ಜಿಲ್ಲೆಗಳಲ್ಲಿ ನಿವೇಶನ ಹಂಚಿಕೆ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. 21 ಜಿಲ್ಲೆಯಲ್ಲಿ ನಿವೇಶನ ಹಂಚಿದ್ದೇವೆ, ನನ್ನ ಅವಧಿಯಲ್ಲಿ ನಿಯಮ ಉಲ್ಲಂಘಿಸಿಲ್ಲ. ಸುಖಾಸುಮ್ಮನೆ ಆರೋಪ ಮಾಡೋದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!