Saturday, December 9, 2023

Latest Posts

ಜೀವ ಬೆದರಿಕೆ ಆರೋಪ: ಹಾಸ್ಯ ನಟಿ ನಯನಾ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಖಾಸಗಿ ಮನರಂಜನಾ ವಾಹಿನಿಯ ಕಾಮಿಡಿಯನ್ ಸೋಮಶೇಖರ್ ಹಾಸ್ಯನಟಿ ನಯನಾ ವಿರುದ್ಧ ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಯನಾ ನನ್ನನ್ನು ನಿಂದಿಸಿ ಹಾಗೂ ಜೀವ ಬೆದರಿಕೆ ಹಾಕಿರುವ ವಾಯ್ಸ್ ನೋಟ್ ಕಳಿಸಿದ್ದಾರೆ ಎಂದು ಸೋಮಶೇಖರ್ ಹೇಳಿದ್ದಾರೆ.

ಅವರು ನನ್ನ ಹಾಗೂ ನನ್ನ ಕುಟುಂಬದ ತಂಟೆಗೆ ಬಾರದಂತೆ ನೋಡಿಕೊಳ್ಳಿ, ನನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಸೋಮಶೇಖರ್ ಮನವಿ ಮಾಡಿದ್ದಾರೆ. ಕಾಮಿಡಿ ಕಾರ್ಯಕ್ರಮವೊಂದರಲ್ಲಿ ರನ್ನರ್ ಅಪ್ ಆಗಿದ್ದ ಸೋಮಶೇಖರ್ ತಂಡಕ್ಕೆ ಮೂರು ಲಕ್ಷ ರೂಪಾಯಿ ಬಹುಮಾನ ಬಂದಿತ್ತು.

ಇದನ್ನು ಸೀನಿಯರ‍್ಸ್ ನಾವು, ನಮಗೂ ಪಾಲು ಕೊಡಿ ಎಂದು ನಯನಾ ಜೋರು ಮಾಡಿದ್ದಾರೆ ಎಂದು ಸೋಮಶೇಖರ್ ಹೇಳಿಕೊಂಡಿದ್ದಾರೆ. ಕೊಡಲಿಲ್ಲವಾದರೆ ಜೀವಕ್ಕೆ ತೊಂದರೆ ಎನ್ನುವಂತಹ ಮಾತುಗಳನ್ನಾಡಿ ವಾಯ್ಸ್ ನೋಟ್ ಕಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸೀನಿಯರ‍್ಸ್‌ಗೆ ಹಣ ನೀಡಬೇಕು ಎಂದಿಲ್ಲ. ಅವರಿಗೆ ಚಾನೆಲ್ ತಿಂಗಳಿಗೆ ಇಷ್ಟು ಹಣ ಎಂದು ನೀಡುತ್ತದೆ ಎಂದು ಸೋಮಶೇಖರ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!