ವಾಮಾಚಾರದ ಆರೋಪ: ಮಹಿಳೆ ಕೊಂದ 33 ಜನರ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು ವಾಮಾಚಾರದ ಆರೋಪ ಹೊರಿಸಿ ಗುಂಪು ಹತ್ಯೆ ಮಾಡಲಾಗಿದೆ. 50 ವರ್ಷದ ಮಹಿಳೆಯನ್ನು 33 ಮಂದಿಯ ಗುಂಪು ಹತ್ಯೆ ಮಾಡಿದೆ. ಈ 33 ಮಂದಿಯನ್ನು ಪೊಲೀಸರು ಬಂಧಿಸಿದ್ದು ಇದರಲ್ಲಿ 20 ಮಂದಿ ಮಹಿಳೆಯರೇ ಇದ್ದಾರೆ.

ಗುಂಪು ಹತ್ಯೆಗೆ ಸಂಬಂಧಿಸಿ ಆರೋಪಿಗಳ ಮೇಲೆ ಕೊಲೆ ಸೇರಿದಂತೆ ಇನ್ನೂ ಐದು ಪ್ರಕರಣಗಳು ದಾಖಲಾಗಿವೆ. ಇನ್ನೂ ಹಲವು ಮಂದಿ ಕೃತ್ಯದಲ್ಲಿ ಭಾಗಿಯಾಗಿದ್ದು, ಅವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಕೊಲೆ ನಡೆದ ಮಧುರಚುವಾ ಗ್ರಾಮದಲ್ಲಿ ಗಂಡಸರೆಲ್ಲರೂ ನಾಪತ್ತೆಯಾಗಿದ್ದಾರೆ. ಗ್ರಾಮದಲ್ಲಿ ಇದೀಗ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಮಾತ್ರ ಇದ್ದಾರೆ.

ನೆರೆಮನೆಯವರ ಮೇಲೆ ಪೊಲೀಸ್ ದೂರು ನೀಡಿದ ಕಾರಣಕ್ಕೆ ಅವರ ಪತ್ನಿ ಝುನು ನಾಯಕ್ ಅವರನ್ನು ಗ್ರಾಮಸ್ಥರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!