9 ಜನರನ್ನು ಬಲಿಪಡೆದಿದ್ದ ನರಭಕ್ಷಕರ ಹುಲಿಗೆ ಗುಂಡಿಕ್ಕಿ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಾದಲ್ಲಿ ಒಂಬತ್ತು ಮನುಷ್ಯರನ್ನು ಕೊಂದುಹಾಕಿದ್ದ ನರಭಕ್ಷಕ ಹುಲಿಯನ್ನು ಶನಿವಾರ ಗುಂಡಿಕ್ಕಿ ಕೊಂದು ಹಾಕಲಾಗಿದೆ.
ನರಭಕ್ಷಕ ಹುಲಿ ಕಳೆದ ನಾಲ್ಕು ದಿನಗಳಲ್ಲಿ ಒಂದು ಮಗು ಸೇರಿದಂತೆ ನಾಲ್ಕು ಜನರನ್ನು ಕೊಂದಿತ್ತು. ಶುಕ್ರವಾರ ಮುಖ್ಯ ವನ್ಯಜೀವಿ ವಾರ್ಡನ್ ಅವರು ಹುಲಿಯನ್ನು ಕೊಲ್ಲಲು ಶೂಟ್-ಔಟ್‌ ಆದೇಶವನ್ನು ಹೊರಡಿಸಿದ್ದರು. ನರಭಕ್ಷಕನಾಗಿ ಪರಿವರ್ತನೆಯಾಗಿದ್ದ ಹುಲಿಯನ್ನು ಶಾಂತಗೊಳಿಸುವ ಮತ್ತು ಸೆರೆಹಿಡಿಯುವ ಪ್ರಯತ್ನಗಳು ಪದೇ ಪದೇ ವಿಫಲವಾದ ಬಳಿಕ ಶೂಟ್-ಆಟ್-ಸೈಟ್ ಆದೇಶವನ್ನು ನೀಡಲಾಗಿತ್ತು

ಎರಡು ದಿನದಲ್ಲಿ ಇಬ್ಬರ ಹತ್ಯೆ:
ಗುರುವಾರ, ಬಿಹಾರದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ವಿಟಿಆರ್) ಹುಲಿ ವ್ಯಕ್ತಿಯೊಬ್ಬನ್ನು ಬಲಿಪಡೆದಿತ್ತು. ಕಳೆದ 27 ದಿನಗಳಲ್ಲಿ ಇದು ಹುಲಿಗ ಎಂಟನೇ ಬಲಿಯಾಗಿತ್ತು. ಸಂಜಯ್ ಮಹತೋ ಎಂಬಾತ ದಾಮ್ರೋ ಗೋವರ್ಧನ್ ಗ್ರಾಮದ ಕೃಷಿ ಕ್ಷೇತ್ರಕ್ಕೆ ತೆರಳಿದ್ದ ವೇಳೆ ಹುಲಿ ಹಿಂದಿನಿಂದ ಸದ್ದೇ ಮಾಡದೆ ದಾಳಿ ನಡೆಸಿದೆ. ಈ ವೇಳೆ ಆತನ ಕತ್ತಿನ ಮೂಳೆ ಮುರಿದು ಎಳೆದೊಯ್ದಿತ್ತು. ಆತನ ಶವದಲ್ಲಿ ಕುತ್ತಿಗೆ ಭಾಗದಲ್ಲಿ ಹುಲಿ ಕಚ್ಚಿದ ಗುರುತುಗಳು ಪತ್ತೆಯಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಒಂದು ದಿನ ಮೊದಲು ಅಂದರೆ ಗುರುವಾರ ಅದೇ ಹುಲಿ ಬಾಘಿ ಪಂಚಾಯತ್ ವ್ಯಾಪ್ತಿಯ ಸಿಹ್ನಿ ಗ್ರಾಮದ ತನ್ನ ಮನೆಯಲ್ಲಿ ಮಲಗಿದ್ದ 12 ವರ್ಷದ ಬಾಲಕಿಯನ್ನು ಕೊಂದುಹಾಕಿತ್ತು. ಮಹಾರಾಷ್ಟ್ರದಲ್ಲಿ ಅವ್ನಿ ಎಂಬ ಹುಲಿಯನ್ನು ಗುಂಡಿಕ್ಕಿ ಕೊಂದ ಖ್ಯಾತ ವನ್ಯಜೀವಿ ಬೇಟೆಗಾರ ನವಾಬ್ ಶಫತ್ ಅಲಿ ಖಾನ್ ಅವರನ್ನು ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಹತ್ಯೆ ಮಾಡಲು ಬಿಹಾರ ಅರಣ್ಯ ಇಲಾಖೆ ನೇಮಿಸಿದೆ.

ಆದಾಗ್ಯೂ, ಹುಲಿ ಬೇಟೆಗಾರನಿಗೆ ಚಳ್ಳೆಹನ್ಣು ತಿನ್ನಿಸುತ್ತಿತ್ತು. ಸೆಪ್ಟೆಂಬರ್ 28 ರಂದು, ಹುಲಿ ಬಲೆಯಿಂದ ತಪ್ಪಿಸಿಕೊಂಡು ಬೇಟೆಗಾರ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿಯೇ ಬೇಟೆಯಾಗಿ ಕಟ್ಟಿಹಾಕಿದ ಮೇಕೆಯನ್ನು ತೆಗೆದುಕೊಂಡು ಹೋಗಿತ್ತು. ಸುಮಾರು ನಾಲ್ಕು ವರ್ಷ ವಯಸ್ಸಿನ ಹುಲಿ ಮನುಷ್ಯರ ಮೇಲೆ ದಾಳಿ ಮಾಡಲು ಆರಂಭಿಸಿದ್ದು ಏಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅರಣ್ಯ ಅಧಿಕಾರಿಗಳ ಪ್ರಕಾರ, ಹುಲಿಯ ದೇಹದ ಮೇಲೆ ಕೆಲವು ಗಾಯದ ಗುರುತುಗಳು ಕಂಡುಬಂದಿವೆ, ಇದು ಮತ್ತೊಂದು ಹುಲಿಯೊಂದಿಗೆ ಕಾದಾಟದ ವೇಳೆ ಗಾಯಗೊಂಡು ಬೇಟೆಯಾಡಲು ಅಶಕ್ತವಾದ ಕಾರಣ ನರಭಕ್ಷಕನಾಗಿ ರೂಪುಗೊಂಡಿರಬಹುದು ಎಂದು ಹೇಳಲಾಗಿದೆ.
ಹುಲಿಗಳು ಮತ್ತು ಚಿರತೆಗಳು ಸೇರಿದಂತೆ ಬೆಕ್ಕಿನ ಜಾತಿಯ ದೊಡ್ಡ ಪ್ರಾಣಿಗಳು ಆರೋಗ್ಯ ಹದಗೆಟ್ಟಾಗ ಅಥವಾ ಬಲಶಾಲಿ ಗಾಯಗಳಿಂದಾಗಿ ಜಿಂಕೆಗಳಂತಹ ನೈಸರ್ಗಿಕ ಬೇಟೆಯನ್ನು ಬೇಟೆಯಾಡಲು ಸಾಧ್ಯವಾಗದಿದ್ದಾಗ ಸಾಕು ಪ್ರಾಣಿಗಳು ಮತ್ತು ಮನುಷ್ಯರ ಮೇಲೆ ದಾಳಿ ಮಾಡುತ್ತವೆ.
ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶವು ಬಿಹಾರದ ಏಕೈಕ ರಾಷ್ಟ್ರೀಯ ಉದ್ಯಾನವನವಾಗಿದ್ದು ಸುಮಾರು 900 ಚದರ ಕಿ.ಮೀ. ವಿಸ್ತೀರ್ಣದಲ್ಲಲಿ ಹಬ್ಬಿಕೊಂಡಿದೆ. 2018 ರ ಹೊತ್ತಿಗೆ, ಮೀಸಲು ಪ್ರದೇಶದಲ್ಲಿ 40 ಹುಲಿಗಳು ಇದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!