ತೆರಿಗೆ ಕಳ್ಳತನದ ಆರೋಪ: ಸಂಕಷ್ಟದಲ್ಲಿ ಶಕೀರಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ʼವಕಾ ವಕಾʼ ಹಾಡಿನ ಮೂಲಕ ಮನೆಮಾತಾಗಿದ್ದ  ಜಾಗತಿಕ ಪಾಪ್‌ ತಾರೆ ಶಕೀರಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಅವರೀಗ ಸುದ್ದಿಯಲ್ಲಿರುವುದು ತೆರಿಗೆ ವಂಚನೆಯ ಕಾರಣಕ್ಕಾಗಿ. ಸ್ಪೇನ್‌ ನಲ್ಲಿ ಅವರು ತೆರಿಗೆ ವಂನೆ ಮಾಡಿದ್ದಾರೆ ಎಂದು ಅಲ್ಲಿನ ಪ್ರಾಸಿಕ್ಯೂಷನ್‌ ಹೇಳಿದೆ. ಒಂದು ವೇಳೆ ಅವರ ತಪ್ಪು ಸಾಬೀತಾದರೆ ಅವರು 8 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. 45 ವರ್ಷದ ಪಾಪ್‌ ಗಾಯಕಿ ಶಕೀರಾ ಅವರು ಸುಮಾರು 24 ಮಿಲಿಯನ್ ಯುರೋಗಳಷ್ಟು (ರೂ.1,94,37,68,415) ದಂಡವನ್ನು ಪಾವತಿಸಬೇಕು ಎಂದುಯ ಪ್ರಾಸಿಕ್ಯೂಷನ್‌ ಮನವಿ ಮಾಡಿದೆ.

ವರದಿಗಳ ಪ್ರಕಾರ ಅವರು 2012 ಮತ್ತು 2014ರ ನಡುವೆ ತಮ್ಮ ಗಳಿಕೆಯಲ್ಲಿ 14.5 ಮಿಲಿಯನ್ ಯುರೋಗಳಷ್ಟು ವಂಚನೆ ಮಾಡಿದ್ದಾರೆ. ಈ ಹಿನ್ನೆಲಯಲ್ಲಿ ಬಾರ್ಸಿಲೋನಾದಲ್ಲಿ ಪ್ರಾಸಿಕ್ಯೂಟರ್‌ಗಳು ಆಕೆಯ ಬಳಿ ದಂಡ ತುಂಬುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ಶಕೀರಾ ಈ ಮನವಿಯನ್ನು ತಿರಸ್ಕರಿಸಿದ್ದಾರೆ. ತಾನೊಬ್ಬ ನಿರಪರಾಧಿ ಎಂದಿರುವ ಅವರು ವಕೀಲರ ಮೂಲಕ ನ್ಯಾಯಾಲಯಕ್ಕೆ ತೆರಳಲು ನಿರ್ಧರಿಸದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಶಕೀರಾ ಅವರ ವಕೀಲರ ಪ್ರಕಾರ, 2014 ರವರೆಗೆ ಅಂತರರಾಷ್ಟ್ರೀಯ ಪ್ರವಾಸಗಳಿಂದ ಹೆಚ್ಚಿನ ಹಣವನ್ನು ಗಳಿಸಿದ ಶಕೀರಾ ಅವರು 2015 ರಲ್ಲಿ ಮಾತ್ರ ಪೂರ್ಣ ಸಮಯ ಸ್ಪೇನ್‌ಗೆ ತೆರಳಿದರು ಮತ್ತು ತಮ್ಮ ಎಲ್ಲಾ ತೆರಿಗೆ ಬಾಧ್ಯತೆಗಳನ್ನು ಅವರು ಪೂರೈಸಿದ್ದಾರೆ. ಇದಲ್ಲದೆ, ಅವರು 17.2 ಮಿಲಿಯನ್ ಯುರೋಗಳನ್ನು ಪಾವತಿಸಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಸ್ಪ್ಯಾನಿಷ್ ತೆರಿಗೆ ಅಧಿಕಾರಿಗಳಿಗೆ ತಾನು 17.2 ಮಿಲಿಯನ್ ಯುರೋಗಳನ್ನು (ರೂ. 1,39,30,34,031) ಪಾವತಿಸಿದ್ದೇನೆ ಮತ್ತು ಹಲವು ವರ್ಷಗಳಿಂದ ಖಜಾನೆಗೆ ತುಂಬ ಬೇಕಾದ ಯಾವುದೇ ಹಣವನ್ನೂ ಉಳಿಸಿಕೊಂಡಿಲ್ಲ ಎಂದು ಶಕೀರಾ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!