ʻಬನ್ನಿʼ ಫೇವರೆಟ್‌ ಫುಡ್‌ ಯಾವುದು ಗೊತ್ತಾ..? ಸ್ನೇಹಾ ರೆಡ್ಡಿ ರಿವೀಲ್‌ ಮಾಡಿದ ಸೀಕ್ರೇಟ್‌ ಏನು..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪುಷ್ಪ ಸಿನಿಮಾದಿಂದ ಪ್ಯಾನ್‌ ಇಂಡಿಯಾ ಸ್ಟಾರ್‌ ಆದ ಅಲ್ಲು ಅರ್ಜುನ್‌ ಇದೀಗ ಪುಷ್ಪ-ದಿ ರೂಲ್‌ನಲ್ಲಿ ಬ್ಯುಸಿ ಆಗಿದ್ದಾರೆ. ಸಿನಿ ನಾಯಕ-ನಾಯಕಿಯರ ಎಷ್ಟೋ ವಿಚಾರಗಳು ಅಭಿಮಾನಿಗಳಿಗೆ ತಿಳಿದಿರುವುದಿಲ್ಲ. ಅವುಗಳ ಬಗ್ಗೆ ಹೆಚ್ಚು ಆಸಕ್ತಿ ಕೂಡ ಇರುತ್ತದೆ. ಅದರಂತೆ ಇದೀಗ ಬನ್ನಿ ಫೇವರೆಟ್‌ ಫುಡ್‌ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮೂಡಿದೆ.

ಬನ್ನಿ ಪತ್ನಿ ಸ್ನೇಹಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟೀವ್‌ ಆಗಿರುತ್ತಾರೆ. ಸ್ನೇಹಾ ತನ್ನ ಮಕ್ಕಳ ಫೋಟೋಗಳು, ಕುಟುಂಬ, ಕೆಲ ಸ್ವೂಟ್‌ ಮೆಮೋರಿಸ್‌ ಎಲ್ಲವನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸ್ನೇಹಾರೆಡ್ಡಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಶ್ನೆ ನಿಮ್ಮದು, ಉತ್ತರ ನನ್ನದು ಎಂಬ ಗೇಮ್‌ ಶುರು ಮಾಡಿದ್ದಾರೆ.

ಅದಕ್ಕೆ ಅಭಿಮಾನಿಯೊಬ್ಬರು ಅಲ್ಲು ಅರ್ಜುನ್ ನೆಚ್ಚಿನ ಆಹಾರ ಯಾವುದು ಎಂದು ಕೇಳಿದ್ದಾರೆ. ಅದಕ್ಕೆ ಸ್ನೇಹಾ ರೆಡ್ಡಿ ʻಬಿರಿಯಾನಿʼ ಎಂದರೆ ಬನ್ನಿಗೆ ಹೆಚ್ಚು ಇಷ್ಟ ಎಂದು ಉತ್ತರಿಸಿದ್ದಾರೆ. ತಮ್ಮ ನಾಯಕನ ನೆಚ್ಚಿನ ಆಹಾರ ಬಿರಿಯಾನಿ ಎಂದು ತಿಳಿದುಕೊಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ವೈರಲ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!