ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಚಿತ್ರರಂಗದಲ್ಲಿ ಮನೆಮಾತಾಗಿರುವ ನಟ ಅಲ್ಲು ಅರ್ಜುನ್ ಬಾಲಿವುಡ್ ಗೆ ಕಾಲಿಡಲಿದ್ದಾರಂತೆ.
ಹೌದು. ಬಹುಭಾಷೆಗಳಲ್ಲಿ ರಿಲೀಸ್ ಆದ ಪುಷ್ಪ ಚಿತ್ರ 300 ಕೋಟಿ ರೂ. ಕಲೆಕ್ಷನ್ ಮಾಡಿಕೊಂಡಿದೆ. ಈ ಗೆಲುವಿನ ಹುಮ್ಮಸ್ಸಿನಲ್ಲಿರುವ ಅಲ್ಲು ಅರ್ಜುನ್ ಗೆ ಬಾಲಿವುಡ್ ನಿಂದ ಆಫರ್ ಬಂದಿದೆಯಂತೆ.
ಈ ಬಗ್ಗೆ ಅವರೇ ಪಿಟಿಐನೊಂದಿಗೆ ಮಾತನಾಡಿದ್ದು, ಹಿಂದಿ ಚಿತ್ರದಲ್ಲಿ ನಟಿಸಲು ನನಗೆ ಆಫರ್ ಬಂದಿದೆ. ಆದರೆ, ಅಲ್ಲಿನ ತೆರೆ ಮೇಲೆ ನನ್ನನ್ನು ನೋಡಲು ಅಭಿಮಾನಿಗಳು ಕಾಯಬೇಕಿದೆ. ಬಾಲಿವುಡ್ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ಬಂದಿದೆ ಆದರೆ ಇನ್ನು ಮಾತುಕತೆ ಗಟ್ಟಿಯಾಗಿಲ್ಲ ಎಂದು ತಿಳಿಸಿದ್ದಾರೆ.
ತೆಲುಗು ಚಿತ್ರಗಳಲ್ಲಿ 20 ವರ್ಷಗಳಿಂದ ನಟಿಸುತ್ತಿರುವ ಯಂಗ್ ಮತ್ತು ಎನರ್ಜಿಟಿಕ್ ನಟ ಈಗ ಬಾಲಿವುಡ್ ಗೆ ಕಾಲಿಡುತ್ತಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಆದರೆ ಚಿತ್ರ ಯಾವುದು ಎನ್ನುವ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ.