ಐಕಾನ್ ಸ್ಟಾರ್‌ನ ಮತ್ತೊಂದು ಮಾಸ್ ಲುಕ್: ಸಿಗರೇಟ್ ಆರೋಗ್ಯಕ್ಕೆ ಹಾನಿಕಾರಕ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ರೇಂಜ್ ಗಿಟ್ಟಿಸಿಕೊಂಡಿದ್ದರಿಂದ ಈಗ ಎಲ್ಲರೂ ಬನ್ನಿ ಟು ಪುಷ್ಪ 2 ಅಂತಿದಾರೆ. ವರ್ಷಗಟ್ಟಲೆ ಪುಷ್ಪ ಸ್ಟೈಲ್‌ನಲ್ಲಿರುವ  ಬನ್ನಿ ದಿಢೀರ್ ಎರಡು ಹೊಸ ಗೆಟಪ್ ಗಳಲ್ಲಿ ಕಾಣಿಸಿಕೊಂಡು ಶಾಕ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ತ್ರಿವಿಕ್ರಮ್ ನಿರ್ದೇಶನದಲ್ಲಿ ಜಾಹೀರಾತೊಂದನ್ನು ಶೂಟ್ ಮಾಡಿ ಅದಕ್ಕೆ ಫೋಟೋಶೂಟ್ ಮಾಡಿದ್ದಾರೆ. ಆ ಫೋಟೋ ವೈರಲ್ ಆಗಿತ್ತು. ಇದೀಗ ಮತ್ತೊಂದು ಮಾಸ್ ಲುಕ್‌ನಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಹರೀಶ್ ಶಂಕರ್ ನಿರ್ದೇಶನದ ಹೊಸ ಜಾಹೀರಾತಿನಲ್ಲಿ ನಟಿಸಿದ್ದಾರೆ. ಈ ಜಾಹೀರಾತು ಚಿತ್ರೀಕರಣಕ್ಕಾಗಿ ಅವರು ಮತ್ತೊಂದು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಪಕ್ಕಾ ಮಾಸ್ ಲೋಕಲ್‌ ಹಾಗೆ ಕಾಣಿಸಿಕೊಂಡಿದ್ದಾರೆ ಬನ್ನಿ.‌ ಈ ಲುಕ್ ಅನ್ನು ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಕಿವಿ ಓಲೆ,  ಸೈಡ್ ಹೇರ್ ಕಟಿಂಗ್, ಶರ್ಟ್ ಮೇಲೆ ಶರ್ಟ್, ದಪ್ಪ ಚೈನ್, ಉಂಗುರಗಳು, ಬಾಯಿಯಲ್ಲಿ ಸಿಗರೇಟ್ ಮತ್ತು‌ ಸನ್‌ ಗ್ಲಾಸ್‌ ಧರಿಸಿ ಫುಲ್ ಮಾಸ್ ಆಗಿ ಕಾಣಿಸಿಕೊಂಡಿದ್ದು, ಸಿಗರೇಟ್‌ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಶೀರ್ಷಿಕೆ ನೀಡಿದ್ದಾರೆ. ಅಲ್ಲು ಅರ್ಜುನ್‌ ಮಾಸ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!