ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ (Pushpa 2) ಚಿತ್ರ ಡಿ.5ಕ್ಕೆ ರಿಲೀಸ್‌ಗೆ ಸಿದ್ಧವಾಗಿದೆ. ಇದರ ನಡುವೆ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್‌ಗೆ ಅಲ್ಲು ಅರ್ಜುನ್ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಪೋಸ್ಟ್ ಮಾಡಿ, ಟಿಕೆಟ್ ಬೆಲೆ ಹೆಚ್ಚಿಸಲು ಅವಕಾಶ ನೀಡಿದ ಆಂಧ್ರ ಸರ್ಕಾರಕ್ಕೆ ಧನ್ಯವಾದ. ಈ ಪ್ರಗತಿಪರ ನಿರ್ಧಾರವು ತೆಲುಗು ಚಿತ್ರರಂಗದ ಬೆಳವಣಿಗೆ ಮತ್ತು ಏಳಿಗೆಗೆ ನೀವು ತೋರುತ್ತಿರುವ ಬದ್ಧತೆಯನ್ನು ತೋರಿಸುತ್ತದೆ ಎಂದಿದ್ದಾರೆ. ಚಿತ್ರರಂಗದ ಕಲ್ಯಾಣಕ್ಕೆ ಸಹಕರಿಸಿದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಧನ್ಯವಾದ ಎಂದು ಅವರು ಬರೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ‘ಪುಷ್ಪ 2’ ಸಿನಿಮಾದ ಟಿಕೆಟ್ ದರ ಹೆಚ್ಚಿಸಿದ್ದಾರೆ. ಆದರೆ, ಆಂಧ್ರ ಮತ್ತು ತೆಲಂಗಾಣ, ತಮಿಳುನಾಡು ಭಾಗದಲ್ಲಿ ಸರ್ಕಾರ ಒಪ್ಪಿಗೆ ನೀಡಿದರೆ ಮಾತ್ರ ಟಿಕೆಟ್ ದರ ಹೆಚ್ಚಿಸಬಹುದು. ಅದು ಸರ್ಕಾರ ನಿಗದಿ ಮಾಡಿದ ಮಿತಿಯಲ್ಲೇ ಇರಬೇಕು. ಹಾಗಾಗಿ ಚಿತ್ರತಂಡದ ಪರವಾಗಿ ಅಲ್ಲು ಅರ್ಜನ್ ಅವರು ಪವನ್ ಕಲ್ಯಾಣ್‌ಗೆ ಧನ್ಯವಾದ ತಿಳಿಸಿದ್ದಾರೆ.