Thursday, July 7, 2022

Latest Posts

ರಾಕಿಭಾಯ್‌ಗೆ ಪುಷ್ಪ ಫಿದಾ, ಕೆಜಿಎಫ್‌ ಚಿತ್ರದ ಬಗ್ಗೆ ಅಲ್ಲುಅರ್ಜುನ್‌ ಮೆಚ್ಚುಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ಕೆಜಿಎಫ್ 2’ ಸದ್ಯ ದೇಶಾದ್ಯಂತ ಬ್ಲಾಕ್‌ ಬಸ್ಟರ್‌ ಚಿತ್ರವಾಗಿ ಹೆಸರು ಮಾಡಿದೆ. ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆದರೂ ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮಾಡುತ್ತಲೇ ಇದೆ. ಎಲ್ಲಾ ಭಾಷೆಗಳ ಪ್ರೇಕ್ಷಕರು ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಕೆಜಿಎಫ್- 2’ಗೆ ಪ್ರೇಕ್ಷಕರೊಂದಿಗೆ ಸೆಲೆಬ್ರಿಟಿಗಳು ಕೂಡ ಶುಭ ಕೋರುತ್ತಿದ್ದಾರೆ.

ಇದೀಗ ಟಾಲಿವುಡ್‌ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಚಿತ್ರದ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದರು. ‘ಕೆಜಿಎಫ್- 2’ ಸಿನಿಮಾ ನೋಡಿದ ಬನ್ನಿ ”ಕೆಜಿಎಫ್-2 ಚಿತ್ರತಂಡಕ್ಕೆ ಅಭಿನಂದನೆಗಳು. ಯಶ್, ನಿಮ್ಮ ನಟನೆ ಅದ್ಭುತವಾಗಿದೆ. ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮತ್ತು ಉಳಿದ ತಾರಾಬಳಗದವರು ಕೂಡ ಉತ್ತಮವಾಗಿ ನಟಿಸಿದ್ದಾರೆ. ರವಿ ಬಸ್ರೂರ್ ಅತ್ಯುತ್ತಮ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕ್ಯಾಮರಾಮನ್ ಭುವನಗೌಡ ಅತ್ಯುತ್ತಮ ದೃಶ್ಯಗಳನ್ನು ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲಾ ತಂತ್ರಜ್ಞರಿಗೆ ಅಭಿನಂದನೆಗಳು, ”ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಅಭಿನಂದಿಸಿದ್ದಾರೆ. ”ನಿರ್ದೇಶಕ ಪ್ರಶಾಂತ್ ನೀಲ್ ಅದ್ಭುತವಾದ ಚಿತ್ರವನ್ನು ನೀಡಿದ್ದಾರೆ. ನಿಮ್ಮ ದೃಷ್ಟಿಕೋನ ಮತ್ತು ನಂಬಿಕೆಯ ಬಗ್ಗೆ ನನಗೆ ಬಹಳ ಗೌರವವಿದೆ. ಅತ್ಯುತ್ತಮ ಸಿನಿಮಾ ಅನುಭವವನ್ನು ಒದಗಿಸಿದ್ದಕ್ಕಾಗಿ ಮತ್ತು ಭಾರತೀಯ ಸಿನಿಮಾದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಕ್ಕಾಗಿ, ಈ ಚಿತ್ರದಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಧನ್ಯವಾದಗಳು. ಎಂದು ಹೊಗಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss