ರಾಹುಲ್ ಗಾಂಧಿ ಜೊತೆಗೆ ಇನ್ನೊಬ್ಬ ‘ರಾಹುಲ್‌ ಗಾಂಧಿ’ ಅನರ್ಹ: ಯಾರು ಆ ವ್ಯಕ್ತಿ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಲೋಕಸಭೆಯಿಂದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅನರ್ಹಗೊಂಡಿರುವ ಹಳೆ ಸುದ್ದಿ.
ಆದರೆ, ಈ ನಡುವೆ ಕೇರಳದ ಇನ್ನೊಬ್ಬ ರಾಹುಲ್‌ ಗಾಂಧಿಯನ್ನು ಕೇಂದ್ರ ಚುನಾವಣಾ ಆಯೋಗ ಅನರ್ಹ ಮಾಡಿದ್ದಾರೆ .

ಹೌದು, ಕೇಂದ್ರ ಚುನಾವಣಾ ಆಯೋಗ, ರಾಹುಲ್ ಗಾಂಧಿ KE S/o ವಲ್ಸಮ್ಮ ಹೆಸರಿನ ಅಭ್ಯರ್ಥಿಯನ್ನು ಭವಿಷ್ಯದ ಚುನಾವಣೆಗಳಿಂದ ನಿಷೇಧ ವಿಧಿಸಿದೆ.
ಇವರು ಚುನಾವಣೆಗೆ ಮಾಡಿರುವ ಖರ್ಚು ವೆಚ್ಚಗಳನ್ನು ನೀಡಲು ವಿಫಲವಾದ ಹಿನ್ನಲೆಯಲ್ಲಿ, ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಂಡ ವ್ಯಕ್ತಿಗಳ ಚುನಾವಣಾ ಆಯೋಗದ ಪಟ್ಟಿಯಲ್ಲಿ ರಾಹುಲ್‌ ಗಾಂಧಿ ಸನ್‌ ಆಫ್‌ ವಲ್ಸಮ್ಮ ಅವರ ಹೆಸರೂ ಕೂಡ ಕಾಣಿಸಿಕೊಂಡಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಸನ್‌ ಆಫ್‌ ವಲ್ಸಮ್ಮ, ಕೇರಳದ ವಯನಾಡ್‌ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇವರು 2196 ಮತಗಳನ್ನು ಪಡೆದುಕೊಂಡಿದ್ದರೆ,ಇಲ್ಲಿಯೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ 7 ಲಕ್ಷ ಮತಗಳ ಅಂತರದ ದಾಖಲೆಯ ಗೆಲುವು ಕಂಡಿದ್ದರು.

ಮಾರ್ಚ್ 29 ರಂದು, ಚುನಾವಣಾ ಸಮಿತಿಯು ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 10 ಎ ಅಡಿಯಲ್ಲಿ ಅನರ್ಹಗೊಂಡ ವ್ಯಕ್ತಿಗಳ ನವೀಕರಿಸಿದ ಪಟ್ಟಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ರಾಹುಲ್ ಗಾಂಧಿ KE S/o ವಲ್ಸಮ್ಮ ಅವರನ್ನು 2021ರ ಸೆಪ್ಟೆಂಬರ್ 13 ರಿಂದ 2024ರ ಸೆಪ್ಟೆಂಬರ್ 13 ರವರೆಗೆ ಅನರ್ಹಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!