ಯಾವಾಗ್ಲೂ ಒಂದು ಸ್ಪೆಪ್ ಮುಂದೆ ! ಭಾರತದಿಂದ ಶತ್ರುಗಳ ಮೇಲೆ ಕಣ್ಣಿಡಲು 52 ಸ್ಪೈ ಸೆಟಿಲೈಟ್​​ಗಳ ನಿಯೋಜನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಶತ್ರುಗಳ ಚಲನವಲನ ಇತ್ಯಾದಿಯನ್ನು ವೀಕ್ಷಿಸಲು ಭಾರತವು ಮುಂದಿನ 5 ವರ್ಷದಲ್ಲಿ 52 ಉಪಗ್ರಹಗಳ ಜಾಲವನ್ನು ಆಗಸದಲ್ಲಿ ಕೂರಿಸಲಿದೆ.

ಇನ್-ಸ್ಪೇಸ್  ಛೇರ್ಮನ್ ಪವನ್ ಕುಮಾರ್ ಗೋಯಂಕಾ ಈ ವಿಷಯವನ್ನು ತಿಳಿಸಿದ್ದಾರೆ. ಅವರ ಪ್ರಕಾರ, ಈ 52 ಗುಪ್ತಚರ ಉಪಗ್ರಹಗಳ ತಯಾರಿಕೆಯಲ್ಲಿ ಖಾಸಗಿ ವಲಯವೂ ಭಾಗವಹಿಸಲಿದೆ.

ಇಂಥ ಮಿಲಿಟರಿ ಮತ್ತು ಸ್ಪೈ ಸೆಟಿಲೈಟ್​​​ಗಳನ್ನು ಇಸ್ರೋದಿಂದ ತಯಾರಿಸಲಾಗುತ್ತದೆ. ಆದರೆ, ಈ ಖಾಸಗಿ ಸಂಸ್ಥೆಗಳಿಗೂ ಇದರಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತಿದೆ ಎಂದು ಗೋಯಂಕಾ ಹೇಳಿದ್ದಾರೆ. 52 ಸೆಟಿಲೈಟ್​​ಗಳಲ್ಲಿ 26 ಉಪಗ್ರಹಗಳನ್ನು ಖಾಸಗಿಯವರು ತಯಾರಿಸಿಕೊಡಲಿದ್ದಾರೆ. ಉಳಿದವನ್ನು ಇಸ್ರೋ ತಯಾರಿಸಲಿದೆ.

ಶತ್ರುಗಳ ಚಲನ ವಲನದ ಮೇಲೆ ಕಣ್ಣಿಡಲು, ಗಡಿಗಳನ್ನು ಗಮನಿಸಲು ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ಸಂಘಟಿತವಾಗಿ ನಡೆಸಲು ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳಿಗೆ ಈ ಸ್ಪೈ ಸೆಟಿಲೈಟ್​​ಗಳು ಸಹಾಯವಾಗಲಿವೆ. ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿರುವ ಈ ಸಂದರ್ಭದಲ್ಲಿ ಭಾರತವು ಸ್ಪೈ ಸೆಟಿಲೈಟ್​​​ಗಳ ಯೋಜನೆ ಘೋಷಿಸಿರುವುದು ಕುತೂಹಲ ಮೂಡಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!