spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾಹಿತ್ಯ ಸೇವೆ ಮಾಡಲು ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ: ಶಿವಾನಂದ ಶೆಲ್ಲಿಕೇರಿ

- Advertisement -Nitte

ದಿಗಂತ ವರದಿ ಬಾಗಲಕೋಟ:

ಕನ್ನಡ ಸಾಹಿತ್ಯ, ಸಂಘಟನೆ ಗಳ ಮೂಲಕ ಬೆಳೆದವನಾಗಿದ್ದೇನೆ. ಜಾನಪದ ಕಲಾವಿದರ , ಕನ್ನಡ ಸಾಹಿತ್ಯ, ಜನಪದ ಸಾಹಿತ್ಯ ಬೆಳವಣಿಗೆಗೆ ಶ್ರಮಿಸಿದ್ದೇನೆ. ಇನ್ನೂ ಶ್ರಮಿಸುತ್ತೆನೆ. ಆದ್ದರಿಂದ ಜನಪದರ , ಸಾಹಿತ್ಯ ಸೇವೆ ಮಾಡಲು ಈ ಕಸಾಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದುಕನ್ನಡ ಸಾಹಿತ್ಯ ಪರಿಷತ್ತು ಚುನಾವಣಾ ಸ್ಪರ್ಧಿ ಶಿವಾನಂದ ಶೆಲ್ಲಿಕೇರಿ ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಕನ್ನಡಿಗರ ಆಶೀರ್ವಾದ, ಜತೆಗೆ ಸಾಹಿತಿಗಳ, ಕವಿಗಳ, ಸಾಹಿತ್ಯಾಸಕ್ತರ ಆಶೀರ್ವಾದ ಇದೆ. ಅವರ ಬೆಂಬಲ ದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಸಹ ಸ್ಪರ್ಧಿಗಳು ನಮ್ಮ ಹಿರಿಯರು. ಇನ್ನಷ್ಟು ಸಾಹಿತ್ಯ ಚಟುವಟಿಕೆಗಳು ಆಗಬೇಕು. ಹೊಸ ಯೋಜನೆ, ಚಿಂತನೆ ಆಗಿ ಬಾಗಲಕೋಟೆ ಜಿಲ್ಲೆಯ ಹೆಸರು ತರುವ ನಿಟ್ಟಿನಲ್ಲಿ ಪ್ರಾಮಾಣಿಕತೆ ಯಿಂದ ಕಾರ್ಯನಿರ್ವಹಿಸುತ್ತೇನೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವುದು . ಸಾಹಿತ್ತಿಕ ಚಟುವಟಿಕೆಗಳನ್ನು ಗ್ರಾಮೀಣ ಭಾಗಗಳಿಗೂ ವಿಸ್ತರಿಸುವುದು . ತಾಲೂಕಿಗೊಂದು ಕನ್ನಡ ಭವನ ನಿರ್ಮಾಣ . ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮೀಣ ಮಟ್ಟದಲ್ಲಿ ಸ್ಥಾಪನೆ ಮಾಡುವುದು. ಲೇಖಕರಿಗೆ ಕತೆ -5 ಕೆ – ಕಾವ್ಯ – ನಾಟಕ ಇತ್ಯಾದಿ ಕಮ್ಮಟಗಳ ಆಯೋಜನೆ ಮಾಡಿ ಯುವ ಬರಹಗಾರರನ್ನು ಪ್ರೋತ್ಸಾಹಿಸುವುದು. ಸಾಹಿತ್ತಿಕ ಚಟುವಟಿಕೆಗಳಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಹೆಚ್ಚಿಸುವುದು . ಬಾಗಲಕೋಟ ಜಿಲ್ಲಾ ಸಾಹಿತಿ – ಕಲಾವಿದರ ಮಾಹಿತಿ ಕೋಶ ರಚನೆ ಮಾಡುವುದು. ಅಲಕ್ಷಿತ ಸಾಹಿತ್ಯ ಹಾಗೂ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು . ದತ್ತಿನಿಧಿಗಳನ್ನು ಹೆಚ್ಚಿಸುವುದು. ಜಿಲ್ಲೆಯ ಹಿರಿಯ ಸಾಹಿತ್ಯ ಹಾಗೂ ಸಂಘಟಕರ ಸಮಿತಿ ರಚನೆ ಮಾಡುವದು. ರಾಜ್ಯ ಮಟ್ಟದ ಸಮ್ಮೇಳನ ಆಯೋಜನೆ ಮಾಡುವ ಯೋಜನೆ ಇದೆ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss