ಹೊಸದಿಗಂತ ಆನ್ಲೈನ್ ಡೆಸ್ಕ್:
ಅಮರ್ನಾಥ್ ಯಾತ್ರೆಗೆ ತೆರಳಲು ಕಾದು ಕುಳಿತವರಿಗೆ ಶುಭ ಸುದ್ದಿ ಇದಾಗಿದೆ.
ಈ ವರ್ಷದ ಅಮರನಾಥ ಯಾತ್ರೆ ಜೂನ್ 28 ರಂದು ಆರಂಭವಾಗಲಿದ್ದು, ಆಗಸ್ಟ್ 22 ಕ್ಕೆ ಮುಕ್ತಾಯವಾಗಲಿದೆ.
ಅನಂತ್ನಾಗ್ ಜಿಲ್ಲೆಯ 36 ಕಿ.ಮೀ ಉದ್ದದ ಪಹಲ್ಗಾಮ್ ಮಾರ್ಗ ಮತ್ತು ಗಂಡರ್ ಬಲ್ ಜಿಲ್ಲೆಯ 14ಕಿ.ಮೀ ಉದ್ದದ ಬಲ್ತಲ್ ಮಾರ್ಗದಲ್ಲಿ ಯಾತ್ರೆ ನಡೆಯಲಿದೆ.
ಯಾತ್ರೆಯಲ್ಲಿ ಪಾಲ್ಗೊಳ್ಳಬಯಸುವವರು ಏಪ್ರಿಲ್ 1ರಿಂದ ಆರಂಭವಾಗುವ ನೋಂದಣಿ ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಿದೆ. ಕಳೆದ ವರ್ಷ ಕೊರೋನಾ ಭೀತಿಯಿಂದಾಗಿ ಅಮರ್ನಾಥ್ ಯಾತ್ರೆ ರದ್ದಾಗಿತ್ತು.