Tuesday, June 28, 2022

Latest Posts

Amazon prime ನಲ್ಲಿರುವ ಈ ಇಂಡಿಯನ್ ಸೀರೀಸ್‌ಗಳನ್ನು ನೋಡಿದ್ದೀರಾ? ಇಲ್ಲಿದೆ Top 6 ಸೀರೀಸ್‌ಗಳ ಲಿಸ್ಟ್..

ಈಗ ವೆಬ್ ಸೀರೀಸ್‌ಗಳದ್ದೇ ಕಾಲ, ಲಾಕ್‌ಡೌನ್ ಸಂದರ್ಭದಲ್ಲಿ ಎಷ್ಟೊಂದು ಸಿನಿಮಾಗಳನ್ನು ವೆಬ್‌ನಲ್ಲಿಯೇ ಬಿಡುಗಡೆ ಮಾಡಲಾಯಿತು. ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್, ಡಿಸ್ನಿ ಹಾಟ್‌ಸ್ಟಾರ್, ವೂಟ್ ಹೀಗೆ ಹತ್ತು ಹಲವು ಆಪ್‌ಗಳಿದ್ದು, ಅವುಗಳಲ್ಲಿ ವೆಬ್ ಸೀರೀಸ್‌ಗಳನ್ನು ನೋಡಬಹುದಾಗಿದೆ. ನಮ್ಮ ಧಾರಾವಾಹಿಗಳಂತೆ ವರ್ಷಗಟ್ಟಲೆ ಇವನ್ನು ನೋಡಬೇಕೆಂದೇನಿಲ್ಲ. ಸೀಸನ್‌ಗಳ ಲೆಕ್ಕದಲ್ಲಿ ಇವು ಬರುತ್ತದೆ. ಈಗ ಅಮೆಜಾನ್ ಪ್ರೈಂ ಅಕೌಂಟ್ ಹೊಂದಿರುವವರು ಯಾವ ಯಾವ ಸೀರಿಸ್‌ಗಳನ್ನು ನೋಡಬಹುದು. ಅದರಲ್ಲೂ ಹಿಂದಿ ಸೀರಿಸ್‌ಗಳನ್ನೂ ಸಹ ಇಲ್ಲಿ ನೋಡಬಹುದು. ಅಮೆಜಾನ್ ಪ್ರೈಂನ ಟಾಪ್ 6 ಹಿಂದಿ ಸೀರೀಸ್‌ಗಳ ಲಿಸ್ಟ್ ನಿಮಗಾಗಿ..
ಮಿರ್ಜಾಪುರ್: ಇಂಡಿಯನ್ ಕ್ರೈಂ ಥ್ರಿಲ್ಲರ್ ಇದಾಗಿದ್ದು,ಯಾವ ಇಂಗ್ಲಿಷ್ ಸೀರೀಸ್‌ಗು ಕಡಿಮೆ ಇಲ್ಲ ಎನ್ನುವಂಥ ಮೇಕಿಂಗ್ ಇದರಲ್ಲಿದೆ. ಪಂಕಜ್ ತ್ರಿಪಾಠಿ ಮುಖ್ಯ ಪಾತ್ರದಲ್ಲಿದ್ದು, ಕಥೆ ನಿಮ್ಮನ್ನು ಸೀರೀಸ್ ಮುಗಿಸುವ ವರೆಗೂ ಬಿಡದಂತೆ ಇದೆ. ಪ್ಯಾರೆಲೆಲ್ ಪ್ಲಾಟ್‌ಗಳಿದ್ದು, ಇವು ಹೇಗೆ ಮೀಟ್ ಆಗುತ್ತವೆ. ಮಧ್ಯೆ ಮಧ್ಯೆ ಬರುವ ಟ್ವಿಸ್ಟ್ ಪ್ರೇಕ್ಷಕರ ಮನ ತಲುಪುತ್ತದೆ.

ಬ್ರೀಥ್: ತಾನು ಪ್ರೀತಿಸದವರನ್ನು ಕಾಪಾಡಲು ಒಬ್ಬ ಮನುಷ್ಯ ಯಾವ ಕೆಲಸಗಳನ್ನು ಮಾಡುತ್ತಾನೆ, ಯಾವ ಮಟ್ಟಕ್ಕೆ ಇಳಿಯುತ್ತಾನೆ ಎನ್ನುವುದು ಬ್ರೀಥ್‌ನ ಕಥಾ ಹಂದರ. ಬ್ರೀಥ್‌ನ ಮುಖ್ಯ ಭೂಮಿಕೆಯಲ್ಲಿ ಸೌಥ್‌ನ ಸೂಪರ್‌ಸ್ಟಾರ್ ಮಾಧವನ್ ಅಭಿನಯಿಸಿದ್ದಾರೆ.

ಇನ್‌ಸೈಡ್ ಎಡ್ಜ್; ಈ ಸೀರೀಸ್ ಕ್ರಿಕೆಟ್ ಕುರಿತಾಗಿದ್ದು,ಪಿಪಿಎಲ್‌ನಲ್ಲಿ ನಡೆಯುವ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಇದೆ. ಇದರಲ್ಲಿ ಎಷ್ಟು ದೊಡ್ಡವರ ಕೈ ಇದೆ, ಅವರು ಹಣಕ್ಕಾಗಿ ಏನೆಲ್ಲಾ ಮಾಡಬಹುದು ಎಂದೂ ಇದೆ. ಕ್ರಿಕೆಟ್ ಫ್ಯಾನ್ಸ್‌ಗೆ ಈ ಸೀರೀಸ್ ತುಂಬಾನೆ ಇಷ್ಟವಾಗಲಿದ್ದು, ಅನಿರೀಕ್ಷಿತ ತಿರುವುಗಳು ತುಂಬಾನೇ ಖುಷಿ ನೀಡುತ್ತದೆ. ತನುಜ್ ತಿವಾರಿ,ರಿಚಾ ಚಡ್ಡಾ, ಅಂಗದ್ ಬೇಡಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

ಮೇಡ್ ಇನ್ ಹೆವನ್: ಇಬ್ಬರು ವೆಡ್ಡಿಂಗ್ ಪ್ಲಾನರ್‌ಗಳ ಕಥೆ ಇದಾಗಿದೆ. ಮಾರ್ಡ್‌ನ್ ಮದುವೆಗಳ ಹಣೆಬರಹ, ಇಂದಿನ ಮೌಲ್ಯಗಳನ್ನು ಇಲ್ಲಿ ತೋರಿಸಲಾಗಿದೆ. ದಿನದಿಂದ ದಿನಕ್ಕೆ ಬರುವ ಸವಾಲುಗಳನ್ನು ಈ ವೆಡ್ಡಿಂಗ್ ಪ್ಲಾನರ‍್ಸ್ ಹೇಗೆ ಎದುರಿಸುತ್ತಾರೆ ಎನ್ನುವ ಸುಂದರ ಕಥೆ ಇದಾಗಿದೆ.

ದ ಫ್ಯಾಮಿಲಿ ಮ್ಯಾನ್: ಇದೊಂದು ಸಾಮಾನ್ಯ ಮನುಷ್ಯನ ಅಸಾಮಾನ್ಯ ಕಥೆ ಆಗಿದೆ. ಟೆರರಿಸಂ ವಿರುದ್ಧ ಹೋರಾಡುವ ರೀತಿ, ಇದನ್ನೆಲ್ಲ ತನ್ನ ಹೆಂಡತಿ ಮಕ್ಕಳಿಗೆ ತಿಳಿಯದಂತೆ ಮಾಡುವ ಚಾಣಾಕ್ಷತನ, ಹಾಸ್ಯ ಎಲ್ಲವೂ ಇದೆ. ಮನೋಜ್ ಬಾಜಪೈ ಹಾಗೂ ಪ್ರಿಯಾಮಣಿ ಮುಖ್ಯ ಪಾತ್ರದಲ್ಲಿ ಕಾಣುತ್ತಾರೆ.

ಫೋರ್ ಮೋರ್ ಶಾಟ್ಸ್ ಪ್ಲೀಸ್: ಇದು ಯುವ ಪೀಳಿಗೆಯ ಸೀರೀಸ್, ಮಲ್ಟಿ ಸ್ಟಾರ್ ಸೀರೀಸ್ ಇಷ್ಟಪಡುವವರಿಗೆ ಹೇಳಿ ಮಾಡಿಸಿದಂತಿದೆ. ನಾಲ್ಕು ಹುಡುಗಿಯರು, ಅವರ ಭಿನ್ನ ಕಥೆಗಳು, ಅವರ ಮಧ್ಯೆ ಸ್ನೇಹ,ಜಗಳ ಹೀಗೆ ಕತೆ ಮುಂದುವರಿಯುತ್ತದೆ. ಈಗಾಗಲೇ ಎರಡು ಸೀಸನ್ ಮುಗಿದಿದ್ದು ಜನ ಮೂರನೇ ಸೀಸನ್‌ಗಾಗಿ ಕಾಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss