ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಮೆಜಾನ್ ಈ ಹಿಂದಿನಿಂದಲೂ ತನ್ನ ವೇದಿಕೆಯನ್ನು ಕೆಲವು ನಕಲಿ ಸಂಸ್ಥೆಗಳಿಗೆ ಸೀಮಿತವಾಗಿರಿಸಿ ಕೋಟ್ಯಾಂತರ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿತ್ತು.
ಆದರೆ ಈಗ ಅದೇ ಅಮೆಜಾನ್ ಕಳಪೆ ಉತ್ಪನ್ನ, ನಕಲಿ ವಿಮರ್ಶೆ ಸೇರಿದಂತೆ ಹಲವಾರು ಕಾರಣಗಳನ್ನು ಕೊಟ್ಟು ಚೀನಾದ ಹಲವು ಪ್ರಾಡಕ್ಟ್ ಗಳನ್ನು ನಿಷೇಧಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಅಮೆಜಾನ್ ಏಷ್ಯಾ ಮಾರುಕಟ್ಟೆಯ ಮುಖ್ಯಸ್ಥ ಸಿಂಡಿ ಟಾಯ್, ಅಮೆಜಾನ್ ನಿಯಮಗಳನ್ನು ಉಲ್ಲಂಘಿಸಿ, ನಕಲಿ ವಿಮರ್ಶೆ, ಕಳಪೆ ಉತ್ಪನ್ನಗಳನ್ನು ನೀಡುತ್ತಿದ್ದ ಆರೋಪ ಕೇಳಿ ಬರುತ್ತಿದ್ದ ಹಿನ್ನೆಲೆ ಅಮೆಜಾನ್ ಮೇ ತಿಂಗಳಿನಿಂದ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡಿದೆ.
ಚೀನಾದ 600 ಬ್ರ್ಯಾಂಡ್ ಗಳು ಸೇರಿದಂತೆ 3000 ಇತರೆ ಪ್ರಾಡಕ್ಟ್ ಗಳನ್ನು ಬ್ಯಾನ್ ಮಾಡಲಾಗಿದೆ ಎಂದಿದ್ದಾರೆ.
ಅಮೆಜಾನ್ ನಲ್ಲಿ ಬ್ಯಾನ್ ಆದ ಚೀನಾ ಕಂಪನಿಗಳ ಪಟ್ಟಿಯಲ್ಲಿ ಆಕೀ, ಎಂಪೌ, ವಾವಾ, ಪಾವ್ ಪವರ್, ಟೋಟ್ರಾನಿಕ್ಸ್ ಸೇರಿದಂತೆ ಹಲವು ಟೆಕ್ ಸಂಸ್ಥೆಗಳನ್ನು ಅಮೆಜಾನ್ ನಿರ್ಬಂಧ ಹೇರಿದೆ.