Monday, August 8, 2022

Latest Posts

ದೇಶದ 35 ನಗರಗಳಿಂದ 8 ಸಾವಿರ ಜನರ ನೇರ ನೇಮಕಾತಿಗೆ ಅಮೇಜಾನ್ ನಿರ್ಧಾರ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬೆಂಗಳೂರು ಸೇರಿದಂತೆ ದೇಶಾದ್ಯಂತ 35 ನಗರಗಳಲ್ಲಿ ಒಟ್ಟು 8 ಸಾವಿರ ಮಂದಿಯನ್ನು ನೇರ ನೇಮಕಾತಿ ಮಾಡಿಕೊಳ್ಳುವುದಾಗಿ ಅಮೇಜಾನ್ ಸಂಸ್ಥೆ ಪ್ರಕಟಿಸಿದೆ.

ಕಾರ್ಪೊರೇಟ್, ತಂತ್ರಜ್ಞಾನ ಹಾಗೂ ಗ್ರಾಹಕ ಸೇವಾ ವಿಭಾಗ ಸೇರಿದಂತೆ ಹಲವು ವಿಭಾಗಗಳಲ್ಲಿ ಭಾರತದಲ್ಲಿ 8 ಸಾವಿರ ನೇಮಕಾತಿ ನಡೆಯಲಿದೆ ಎಂದು ತಿಳಿಸಿದೆ.

ಈ ಬಗ್ಗೆ ಅಮೇಜಾನ್ ಸಂಸ್ಥೆಯ ಎಚ್‌ ಆರ್ ಮುಖ್ಯಸ್ಥೆ ದೀಪ್ತಿ ವರ್ಮಾ ಮಾಹಿತಿ ನೀಡಿದ್ದು, ಅಹಮದಾಬಾದ್, ಭೋಪಾಲ್, ಕೊಯಮತ್ತೂರು, ಬೆಂಗಳೂರು, ಹೈದರಾಬಾದ್, ಚೆನ್ನೈ, ಗುರುಗಾಂವ್, ಮುಂಬೈ, ಕೋಲ್ಕತ್ತಾ, ನೋಯ್ಡಾ, ಅಮೃತಸರ, , ಜೈಪು, ಕಾನ್ಪುರ, ಲೂಧಿಯಾನಾ ಸೇರಿದಂತೆ 35 ನಗರಗಳಲ್ಲಿ ನೇಮಕಾತಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ನೇರ ಹಾಗೂ ಪರೋಕ್ಷವಾಗಿ ಅಮೇಜಾನ್ ಸಂಸ್ಥೆ ಈಗಾಗಲೇ 10 ಲಕ್ಷ ಉದ್ಯೋಗ ಸೃಷ್ಟಿಸಿದೆ. 2025ರವೇಳೆಗೆ ಭಾರತದಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಗುರುಯನ್ನು ಅಮೇಜಾನ್ ಹೊಂದಿದೆ ಎಂದು ವರ್ಮಾ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss