ನೆಟ್ಫ್ಲಿಕ್ಸ್, ಅಮೆಜಾನ್ ಥರದ ಮಾಧ್ಯಮ ವೇದಿಕೆಗಳಿಗೆ ಭಾರತೀಯ ಪರ್ಯಾಯ ಕಟ್ಟಲಿದ್ದಾರೆ ಅಂಬಾನಿ, ಅದಾನಿ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮೀಡಿಯಾ, ಅದರಲ್ಲೂ ಮುಖ್ಯವಾಗಿ ಚಂದಾದಾರಿಕೆಯನ್ನು ಒಳಗೊಂಡ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ಥರದ ಮಾಧ್ಯಮ ಮಾದರಿಯನ್ನು ಭಾರತದಲ್ಲಿ ಕಟ್ಟುವುದಕ್ಕೆ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಈ ಎರಡು ದೈತ್ಯ ಉದ್ದಿಮೆದಾರರ ಉದ್ಯಮಗಳೂ ಪ್ರತ್ಯೇಕವಾಗಿ ಕೈಹಾಕಿವೆ.

ಪಾಶ್ಚಾತ್ಯ ಮಾಧ್ಯಮ ಜಗತ್ತಿನ ಹಳೆ ಹುಲಿ ಮುರ್ಡೋಕ್ ಕುಟುಂಬ. ಇದೀಗ ಅಂಬಾನಿ ಒಡೆತನದ ವಾಯಕಾಂ18 ಜಾಲದಲ್ಲಿ ಜೇಮ್ಸ್ ಮುರ್ಡೋಕ್ ಸುಮಾರು 135 ಶತಕೋಟಿ ರುಪಾಯಿಗಳನ್ನು ಹೂಡಲಿದ್ದಾರೆ.

ಕೆಲವರ್ಷಗಳ ಹಿಂದೆಯೇ ನೆಟ್ವರ್ಕ್18 ಮೂಲಕ ಮಾಧ್ಯಮ ಪ್ರಯಾಣ ಆರಂಭಿಸಿತ್ತು ಅಂಬಾನಿ ಸಾಮ್ರಾಜ್ಯ. ಆದರೆ ಬಂದರು, ಶಕ್ತಿ ಸಂಪನ್ಮೂಲಗಳಲ್ಲಿ ಹೂಡಿಕೆ ಮಾಡಿಕೊಂಡಿದ್ದ ಅದಾನಿ ಸಾಮ್ರಾಜ್ಯ ಮಾತ್ರ ಮಾಧ್ಯಮದ ವ್ಯವಹಾರಕ್ಕೆ ಈಗಷ್ಟೇ ಕಾಲಿಡುತ್ತಿದೆ. ಬ್ಲೂಮ್ಬರ್ಗ್ ಥರದ ಮಾಧ್ಯಮ ವೇದಿಕೆಗಳ ಒಡೆತನ ಹೊಂದಿರುವ ಕ್ವಿಂಟಲಿಯನ್ ಮೀಡಿಯಾದ ದೊಡ್ಡ ಪಾಲನ್ನು ಅದಾನಿ ಮೀಡಿಯಾ ವೆಂಚುರ್ಸ್ ಲಿಮಿಟೆಡ್ ಖರೀದಿಸಲಿದೆ ಎಂಬ ಸುದ್ದಿ ಇದೆ.

ನೆಟ್ಫಿಕ್ಸ್ ಥರದ ಮಾಧ್ಯಮ ಈಗ ಚಂದಾದಾರಿಕೆಯನ್ನು ಕಳೆದುಕೊಳ್ಳುತ್ತಿದೆ. ಸುದ್ದಿ ಮತ್ತು ಮಾಹಿತಿಗಳನ್ನು ಒಟಿಟಿಯಲ್ಲಿ ಪ್ರಾರಂಭದಲ್ಲಿ ಒಂದು ವರ್ಗ ಮಾತ್ರ ಚಂದಾದಾರಿಕೆ ಹಣ ಕೊಟ್ಟು ನೋಡುತ್ತಿತ್ತು. ಆ ವರ್ಗಕ್ಕೆ ವಿದೇಶಿ ನಿರೂಪಣೆಯ ಸರಕುಗಳು ಹಿಡಿಸುತ್ತಲೂ ಇದ್ದವು. ಆದರೆ, ಭಾರತದಲ್ಲೀಗ ಮಧ್ಯಮ ವರ್ಗ ದೊಡ್ಡದಾಗುತ್ತ ಸಾಗಿದೆ. ಈಗ ಹುಟ್ಟಿಕೊಳ್ಳುತ್ತಿರುವ ಚಂದಾದಾರರಿಗೆ ಕೇವಲ ವಿದೇಶಿ ಮೂಲದ ಕಂಟೆಂಟ್ ಅಷ್ಟಾಗಿ ರುಚಿಸುವುದಿಲ್ಲ. ಈ ಸಂದರ್ಭದಲ್ಲಿ ಅಂಬಾನಿ ಮತ್ತು ಅದಾನಿ ಒಡೆತನದ ಇದೇ ನೆಲದ ಎರಡು ಬಹುದೊಡ್ಡ ಉದ್ದಿಮೆಗಳು ತಮ್ಮದೇ ಮಾರ್ಗಗಳಲ್ಲಿ ಈ ವಿಭಾಗವನ್ನು ಪ್ರವೇಶಿಸುವುದಕ್ಕೆ ಹೊರಟಿರುವುದು ಕುತೂಹಲಕ್ಕೆ ಕಾರಣವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!