ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯದಲ್ಲಿ ಮೊದಲ ಬಾರಿಗೆ ಅಂಬರ್ ಗ್ರೀಸ್ ಅಕ್ರಮ ಮಾರಾಟ ಪ್ರಕರಣ ದಾಖಲಾಗಿದ್ದು, ಬೆಂಗಳೂರು ಪೊಲೀಸರು ಅಕ್ರಮವಾಗಿ ಮಾರಾಟ ಮಾಡ್ತಿದ್ದ ಜಾಲ ಭೇದಿಸಿದ್ದಾರೆ.
ಕೆ.ಜಿ. ಹಳ್ಳಿ ಪೊಲೀಸರು ಅಂಬರ್ ಗ್ರೀಸ್ ಆಕ್ರಮ ಮಾರಾಟಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಿದ್ದು, ಸೈಯದ್ ತಜ್ಮುಲ್ ಪಾಷಾ, ರಫೀ ಉಲ್ಲಾ ಷರೀಫ್, ಸಲೀಂ ಪಾಷಾ, ನಾಸೀರ್ ಪಾಷಾ ಬಂಧಿತ ಆರೋಪಿಗಳು.
ಇನ್ನು ಈ ಬಂಧಿತರಿಂದ 8 ಕೋಟಿ ರೂಪಾಯಿ ಮೌಲ್ಯದ ಅಂಬರ್ ಗ್ರೀಸ್ ಜಪ್ತಿ ಮಾಡಲಾಗಿದೆ.
ಅಂಬರ್ ಗ್ರೀಸ್ ಎಂದರೇ, ತಿಮಿಂಗಲದ ವೀರ್ಯದ ವಸ್ತು. ಇದು ಘನ ಮೇಣದ ವಾಸನೆಯಿಂದ ಕೂಡಿದ್ದು, ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಗೆ ಬಳಸಲಾಗುತ್ತೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1.7 ಕೋಟಿ ಮೌಲ್ಯವಿದೆ. ಒಂದು ಕೆ.ಜಿ ಅಂಬರ್ ಗ್ರೀಸ್ ಬೆಲೆ 1.7 ಕೋಟಿ ರೂಪಾಯಿ ಆಗಿದೆ.