ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಥಾಣೆ ಅಪರಾಧ ವಿಭಾಗದ ಕಲ್ಯಾಣ್ ಘಟಕವು ಮೂವರನ್ನು ಬಂಧಿಸಿ 6.20 ಕೋಟಿ ಮೌಲ್ಯದ 5.6 ಕೆಜಿ ಆಂಬರ್ಗ್ರಿಸ್ ವಶಪಡಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅನಿಲ್ ಭೋಸಲೆ, ಅಂಕುಶ ಶಂಕರ ಮಾಳಿ ಮತ್ತು ಲಕ್ಷ್ಮಣ ಶಂಕರ ಪಾಟೀಲ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಪೈಪ್‌ಲೈನ್ ರಸ್ತೆಯಿಂದ ಬದ್ಲಾಪುರಕ್ಕೆ ಕಾರಿನಲ್ಲಿ ಆಂಬರ್ಗ್ರಿಸ್ ಅನ್ನು ಅಕ್ರಮವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಪರಾಧ ದಳಕ್ಕೆ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಶಪಡಿಸಿಕೊಳ್ಳಲಾಗಿದೆ.
ಮೂವರು ಆರೋಪಿಗಳನ್ನು ಮಂಗಳವಾರದವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.