ಪುಟ್ಟ ದ್ವೀಪದಲ್ಲಿ ಹುಟ್ಟಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೀಪವಾಗಿ ಬೆಳಗಿದ ಅಮಚಡಿ ತೇವನ್…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವಿಶೇಷ)
ಅಮಚಡಿ ತೇವನ್ ಹುಟ್ಟಿದ್ದು ಕೇರಳದ ಆಲಪ್ಪುಳ ಜಿಲ್ಲೆಯ ಚೆರ್ತಲಾ ತಾಲೂಕಿನ ಪೆರುಂಬಲಂ ದ್ವೀಪದಲ್ಲಿ. ಇವರು ಜನಿಸಿದ ಅಸ್ಪೃಶ್ಯರಾದ ಪುಲಯ ಸಮುದಾಯವು ಸಮಾಜದಲ್ಲಿ ಶೋಚನೀಯ ಜೀವನ ಸಾಗಿಸುತ್ತಿತ್ತು. ಇತರ ಪುಲಿಯ ಮಕ್ಕಳಿಗಿಂತ ಭಿನ್ನವಾಗಿ, ತೇವನ್ ಕ್ರಾಂತಿಕಾರಿ ಮಹಿಳೆ ಅಚ್ಚುಕುಟ್ಟಿ ಅಮ್ಮನ ಸಹಾಯದಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆಯುವ ಭಾಗ್ಯ ಪಡೆದರು. ಇದರಿಂದ ಕ್ಷುದ್ರರಾದ ಇತರೆ ವರ್ಗದವರ ಪ್ರತಿಭಟನೆಗಳಿಂದ ಮನೆಯಿಂದ ಹೊರಹಾಕಲ್ಪಟ್ಟು ಇತರ ಪುಲಯರಂತೆ ಗದ್ದೆ ಕೆಲಸಗಾರನಾದರು. ತೇವನ್ ಅಕ್ಷರಭ್ಯಾಸದ ಬಲದಿಂದ ಸಮಾಜ ಸುಧಾರಕರ ಕೃತಿಗಳನ್ನು ಓದಬಲ್ಲವರಾಗಿದ್ದರು.
ಕಾಲಕ್ರಮೇಣ ಅವರು ಗಾಂಧೀಜಿ ಮತ್ತು ಶ್ರೀ ನಾರಾಯಣ ಗುರುಗಳ ಬರಹಗಳತ್ತ ಆಕರ್ಷಿತರಾದರು. ಈ ವೇಳೆ ತೇವನ್‌ ಬೌದ್ಧಿಕ ಪ್ರಗತಿ ಸಹಿಸದ ಗುಂಪೊಂದು ಆತನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿತು. ಈ ವೇಳೆ ತೇವನ್‌ ರನ್ನು ಬಂಧಿಸಿದ ಪೊಲೀಸರು ಆತನನ್ನು ಕ್ರೂರವಾಗಿ ಹಿಂಸಿಸಿದರು. ಇದರಿಂದ ಹತಾಶರಾದ ತೇವನ್‌ ಅಸ್ಪೃಶ್ಯತೆಯನ್ನು ಪ್ರಬಲವಾಗಿ ವಿರೋಧಿಸಿದರು ಮತ್ತು ಕಾಂಗ್ರೆಸ್ಸಿನ ಬೆಂಬಲಿಗರಾದರು. ಕೆಳವರ್ಗದವರ ಸ್ವಾತಂತ್ರ್ಯದ ಸಂಕೇತವಾಗಿ ಸದಾ ಬಿಳಿ ಬಟ್ಟೆಯನ್ನು ಧರಿಸುತ್ತಿದ್ದರು.
ಅಸ್ಪೃಶ್ಯತೆ ಮತ್ತು ಅನಾಚಾರದ ವಿರುದ್ಧ ಸಾಮೂಹಿಕ ಹೋರಾಟಕ್ಕೆ ಕಾಂಗ್ರೆಸ್ ಕರೆ ನೀಡಿದಾಗ ಟಿ.ಕೆ. ಮಾಧವನ್ ಅವರು ವೈಕಂ ಸತ್ಯಾಗ್ರಹವನ್ನು ಪ್ರಾರಂಭಿಸುವ ಪ್ರಯತ್ನದ ಭಾಗವಾಗಿ ತೇವನ್ ಅವರನ್ನು ಭೇಟಿಯಾದರು. ಟಿ.ಕೆ.ಮಾಧವನ್ ಪೂತೊಟ್ಟ ದೇವಸ್ಥಾನಕ್ಕೆ ಪ್ರವೇಶಿಸಿದಾಗ ಅಮಚಡಿ ತೇವನ್ ಮತ್ತು ಕೆಳವರ್ಗದ ಪುಲಯರ ಗುಂಪು ಸಹ ದೇವಸ್ಥಾನವನ್ನು ಪ್ರವೇಶಿಸಿ ದೇವರ ಮುಂದೆ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ತೇವನ್ ಮತ್ತು ಟಿ.ಕೆ.ಮಾಧವನ್ ಅವರನ್ನು ಬಂಧಿಸಿ ಎರಡು ವಾರಗಳ ಕಾಲ ಜೈಲಿನಲ್ಲಿರಿಸಲಾಯಿತು.
ಪ್ರಬಲ ಕಾಂಗ್ರೆಸ್ಸಿಗರಾಗಿ, ಅವರು ವೈಕ್ಕಂ ಸತ್ಯಾಗ್ರಹವನ್ನು ಸೇರಿದರು. ಸತ್ಯಾಗ್ರಹದ ಸಮಯದಲ್ಲಿ ಕೇಶವ ಮೆನನ್ ಮತ್ತು ಟಿ.ಕೆ.ಮಾಧವನ್ ಅವರು ತೇವರ್ ರನ್ನು ಬಲವಾಗಿ ಬೆಂಬಲಿಸಿದರು. ಕೆ.ಪಿ.ಕೇಶವ ಮೆನನ್ ಅವರು ಗಾಂಧೀಜಿಯನ್ನು ಭೇಟಿಯಾಗಲು ತೇವನ್‌ಗೆ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಕೆಳವರ್ಗದ ಜನರಲ್ಲಿ ಮದ್ಯದ ಬಳಕೆಯ ವಿರುದ್ಧ ಜಾಗೃತಿ ಮೂಡಿಸಲು ಗಾಂಧೀಜಿ ತೇವನ್‌ಗೆ ಸಲಹೆ ನೀಡಿದರು. ಎಲೆಗಳು ಮತ್ತು ಕಲ್ಲುಗಳಿಂದ ಮಾಡಿದ ಆಭರಣಗಳನ್ನು ಧರಿಸುವುದನ್ನು ಬಿಡಲು ಕೆಳ ಜಾತಿಯ ಜನರನ್ನು ಪ್ರೋತ್ಸಾಹಿಸುವಂತೆ ಗಾಂಧೀಜಿ ಕೇಳಿಕೊಂಡರು. ತೇವರ್‌ ಗಾಂಧಿಯವರ ಮಾತನ್ನು ಪಾಲಿಸುವಂತೆ ಕೆಳವರ್ಗದವರನ್ನು ಪ್ರೇರೇಪಿಸಿದರು. ಆ ಬಳಿಕ ವೈಕೋಮ್ ಸತ್ಯಾಗ್ರಹದ ಸಮಯದಲ್ಲಿ ತೇವರ್ ವಿರೋಧಿಗಳ ದಾಳಿಗೊಳಗಾದರು ಮತ್ತು ಈ ಸಂದರ್ಭದಲ್ಲಿ ಅವರ ಕಣ್ಣುಗಳಿಗೆ ಸುಣ್ಣದ ದ್ರಾವಣವನ್ನು ಸುರಿಯಲಾಯಿತು, ಇದರಿಂದ ತೇವರ್‌ ಗೆ ಕುರುಡುತನ ಕಾಡತೊಡಗಿತು. ಈ ಘಟನೆ ತಿಳಿದ ಕೆ.ಪಿ. ಕೇಶವ ಮೆನನ್, ಗಾಂಧೀಜಿಯವರು ಔಷಧಗಳನ್ನು ಕಳುಹಿಸಿ ಅವರಿಗೆ ದೃಷ್ಟಿ ಮರಳಿ ಪಡೆಯಲು ನೆರವಾದರು.
ವೈಕೋಮ್ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ, ತೇವನ್ ಮತ್ತು ಇತರ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದರು. ಅವರು 1925 ರಲ್ಲಿ ಜೈಲಿನಿಂದ ಹಿಂತಿರುಗಿದರು, ಆ ಹೊತ್ತಿಗೆ ಅಮಚಡಿಯಲ್ಲಿ ಅವರ ವಾಸಸ್ಥಾನವು ಅವರನ್ನು ವಿರೋಧಿಸುತ್ತಿದ್ದ ಜನರಿಂದ ನಾಶವಾಗಿತ್ತು. ಆವೇಳೆ ಮಾಧವನ್‌ ರ ಸಹಾಯದಿಂದ ತೇವರ್‌ ಗೆ ಒಂದು ಎಕರೆ ಜಮೀನು ಸಿಕ್ಕಿತು. ಅಮಚಡಿ ತುರುತ್‌ನಲ್ಲಿ ತೇವನ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!