spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಬೂಲ್ ಹೊಟೇಲ್ ಗಳಿಂದ ತಕ್ಷಣ ಜಾಗ ಖಾಲಿ ಮಾಡಿ: ಪ್ರಜೆಗಳಿಗೆ ವಾರ್ನಿಂಗ್ ಕೊಟ್ಟಿದೆ ಅಮೆರಿಕ, ಬ್ರಿಟನ್

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇತ್ತೀಚೆಗೆ ಕಾಬೂಲ್ ನಲ್ಲಿರುವ ಐಶಾರಾಮಿ ಹೊಟೇಲ್ ಗಳ ಮೇಲೆ ಭಯೋತ್ಪಾದಕರ ದಾಳಿ ನಡೆದಿದ್ದು, ಭದ್ರತಾ ಬೆದರಿಕೆಗಳಿರುವುದರಿಂದ ಹೊಟೇಲ್ ಗಳಿಂದ ನಿರ್ಗಮಿಸುವಂತೆ ಅಮೆರಿಕ ಹಾಗೂ ಬ್ರಿಟನ್ ತಮ್ಮ ಪ್ರಜೆಗಳಿಗೆ ಎಚ್ಚರಿಸಿದೆ.
ಕಾಬೂಲ್ ನ ಹೊಟೇಲ್ ಸೆರೆನಾ ಸೇರಿ ಸುತ್ತಮುತ್ತಲಿನ ಯಾವುದೇ ಹೊಟೇಲ್ ಗಳಲ್ಲಿ ವಾಸ್ತವ್ಯ ಹೂಡಬೇಡಿ. ಈಗಾಗಲೇ ಆ ಹೊಟೇಲ್ ಗಳಲ್ಲಿ ನೆಲೆಸಿದ್ದರೆ ಕೂಡಲೇ ಅಲ್ಲಿಂದ ನಿರ್ಗಮಿಸಿ ಎಂದು ಅಮೆರಿಕ ತಿಳಿಸಿದೆ.
ಈ ನಡುವೆ ಬ್ರಿಟನ್ ಕೂಡ ತನ್ನ ಪ್ರಜೆಗಳಿಗೆ ಅಫ್ಘಾನಿಸ್ತಾನಕ್ಕೆ ಹೋಗದಂತೆ ತಿಳಿಸಿದ್ದು, ಕಾಬೂಲ್ ನಲ್ಲಿರುವ ಹೊಟೇಲ್ ಗಳಲ್ಲಿ ಉಳಿಯದಂತೆ ಸಲಹೆ ನೀಡಿದೆ.
ಜೊತೆಗೆ ಇತ್ತೀಚೆಗೆ ಉತ್ತರ ಅಫ್ಘಾನಿಸ್ತಾನದ ಕುಂಡುಜ್‌ನ ಮಸೀದಿ ಮೇಲೆ ಅತ್ಮಹತ್ಯೆ ಬಾಂಬ್ ದಾಳಿ ನಡೆದಿರುವ ಹಿನ್ನೆಲೆ ಅಮೆರಿಕ ಹಾಗೂ ಬ್ರಿಟನ್ ತನ್ನ ಪ್ರಜೆಗಳಿಗೆ ಜಾಗೃತರಾಗಲು ತಿಳಿಸಿದೆ.
ಅಫ್ಘಾನಿಸ್ತಾನ ತಾಲಿಬಾನ್ ವಶವಾಗುವ ಮುನ್ನ ಸೆರೆನಾ ಹಾಗೂ ಕಾಬೂಲ್ ನಲ್ಲಿರುವ ಇತರೆ ಹೋಟೆಲ್ ಗಳಲ್ಲಿ ವಿದೇಶಿ ಪ್ರಜೆಗಳು ವಾಸ್ತವ್ಯ ಹೂಡುತ್ತಿದ್ದರು. ಇದನ್ನೇ ಗುರಿಯಾಗಿಸಿಕೊಂಡು ಈಗಾಗಲೇ 2 ಬಾರಿ ಈ ಹೊಟೇಲ್ ಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss