Thursday, August 11, 2022

Latest Posts

ಅಲ್‌ ಖೈದಾಕ್ಕೆ ಮತ್ತೊಂದು ಆಘಾತ ಕೊಟ್ಟ ಅಮೆರಿಕ: ಅಲ್‌ ಜವಾಹಿರಿಯನ್ನು ಹೊಡೆದುರುಳಿಸಿದ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಅಲ್‌ ಖೈದಾ ನಾಯಕ ಅಲ್‌ ಜವಾಹಿರಿಯನ್ನು ಅಮೆರಿಕ ಭದ್ರತಾ ಪಡೆಗಳು ಹೊಡೆದುರುಳಿಸಿವೆ. 2011ರಲ್ಲಿ ಒಸಾಮಾ ಬಿನ್‌ ಲಾಡೆನ್‌ ಹತ್ಯೆ ಮಾಡಿದ ಬಳಿಕ ಉಗ್ರಗಾಮಿ ಸಂಘಟನೆಗೆ ನೀಡಿದ ಬಹುದೊಡ್ಡ ಹೊಡೆತ ಇದಾಗಿದೆ.

ಅಪ್ಘಾನಿಸ್ತಾನದಲ್ಲಿ ನಡೆದ ಕಾರ್ಯಾಚರಣೆಯೊಂದರಲ್ಲಿ ಅಲ್ ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿಯನ್ನು ಯುನೈಟೆಡ್ ಸ್ಟೇಟ್ಸ್ ಕೊಂದಿದೆ ಎಂದು ಅಧ್ಯಕ್ಷ ಜೋ ಬಿಡೆನ್ ಸೋಮವಾರ ಹೇಳಿದ್ದಾರೆ, ಈಜಿಪ್ಟಿನ ಮೂಲದವನಾಘಿರುವ ಜವಾಹಿರಿಯ ತಲೆ ಮೇಲೆ 25 ಮಿಲಿಯನ್ ಡಾಲರ್‌ ಬಹುಮಾನ ಘೋಷಿಸಲಾಗಿತ್ತು. ಸೆಪ್ಟೆಂಬರ್ 11, 2001 ರಂದು ಅಮೆರಿಕದ ವರ್ಲ್ಡ್‌ ಟ್ರೇಡ್‌ ಸೆಂಟರ್‌ ಮೇಲೆ ನಡೆದ ದಾಳಿಯಲ್ಲಿ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಜವಾಹಿರಿ ಈ ದಾಳಿಯನ್ನು ಸಂಘಟಿಸಲು ಸಹಾಯ ಮಾಡಿದ್ದ ಎನ್ನಲಾಗಿದೆ.

ಪ್ರಸ್ತುತ ಅಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿ ಭಾನುವಾರ ಬೆಳಿಗ್ಗೆ 6:18 ಕ್ಕೆ (0148 GMT) US ಡ್ರೋನ್ ದಾಳಿಯಲ್ಲಿ ಜವಾಹಿರಿ ಹತನಾಗಿದ್ದಾನೆ ಎಂದು ಅಮೆರಿಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. “ಈಗ ನ್ಯಾಯವನ್ನು ನೀಡಲಾಗಿದೆ. ಈ ಭಯೋತ್ಪಾದಕ ನಾಯಕ ಇನ್ನಿಲ್ಲ. ಎಷ್ಟೇ ಸಮಯ ಬೇಕಾದರೂ, ನೀವು ಎಲ್ಲಿ ಅಡಗಿಕೊಂಡರೂ, ನಮ್ಮ ಜನರಿಗೆ ನೀವು ಬೆದರಿಕೆಯಾಗಿದ್ದರೆ, ಯುನೈಟೆಡ್ ಸ್ಟೇಟ್ಸ್ ನಿಮ್ಮನ್ನು ಹುಡುಕುತ್ತದೆ ಮತ್ತು ನಿಮ್ಮನ್ನು ಹೊಡೆದುಹಾಕುತ್ತದೆ” ಎಂದು ಸದ್ಯ ಕೊವಿಡ್‌ ನಿಂದ ಚೇತರಿಸಿಕೊಳ್ಳುತ್ತಿರುವ ಅಧ್ಯಕ್ಷ ಜೋ ಬಿಡೆನ್‌ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss