ಚೀನಾಗೆ ವಿರುದ್ಧವಾಗಿ ತೈವಾನ್‌ ಗೆ 1.1ಬಿಲಿಯನ್‌ ಡಾಲರ್‌ ಶಸ್ತ್ರಾಸ್ತ್ರ ಪ್ಯಾಕೇಜ್‌ ಘೋಷಿಸಿದ ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತೈವಾನ್‌ ಗೆ ಅಮೆರಿಕದ ನಾನ್ಸಿ ಪೆಲೋಸಿಯ ಭೇಟಿಯ ನಂತರ, ನಿರಂತರವಾಗಿ ಚೀನಾದಿಂದ ಬೆದರರಿಕೆಗಳನ್ನು ಎದುರಿಸುತ್ತಿರುವ ತೈವಾನ್‌ ಗೆ ಪ್ರಸ್ತುತ 1.1 ಬಿಲಿಯನ್‌ ಡಾಲರ್‌ ರಕ್ಷಣಾ ಉಪಕರಣಗಳನ್ನು ಸರಬರಾಜು ಮಾಡಲು ಅಮೆರಿಕ ಮುಂದಾಗಿದೆ.

60 ಹಡಗು ವಿರೋಧಿ ಕ್ಷಿಪಣಿಗಳು ಮತ್ತು 100 ಏರ್-ಟು-ಏರ್ ಕ್ಷಿಪಣಿಗಳನ್ನು ಒಳಗೊಂಡಂತೆ ತೈವಾನ್‌ಗೆ 1.1 ಬಿಲಿಯನ್‌ ಡಾಲರ್‌ ಮಿಲಿಟರಿ ಉಪಕರಣಗಳ ಮಾರಾಟವನ್ನು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಅನುಮೋದಿಸಿದೆ ಎಂದು ಪೆಂಟೆಗನ್ ಹೇಳಿದೆ ಎಂದು ಮೂಲಗಳು ಉಲ್ಲೇಖಿಸಿವೆ.

ಕಳೆದ ತಿಂಗಳು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಭೇಟಿ ನೀಡಿದ ನಂತರ ತೈವಾನ್‌ನ ಸುತ್ತಲೂ ಚೀನಾದ ಆಕ್ರಮಣಕಾರಿ ಮಿಲಿಟರಿ ಡ್ರಿಲ್‌ಗಳ ಹಿನ್ನೆಲೆಯಲ್ಲಿ ಈ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ. ಸುಮಾರು 85.6 ಮಿಲಿಯನ್ ಡಾಲರ್ ವೆಚ್ಚದಲ್ಲಿ ಸೈಡ್‌ವಿಂಡರ್ ಕ್ಷಿಪಣಿಗಳು ಮತ್ತು ಸಂಬಂಧಿತ ಸಾಧನಗಳನ್ನು ಒಳಗೊಂಡಿದೆ, ಅಂದಾಜು 355 ಮಿಲಿಯನ್ ಡಾಲರ್ ವೆಚ್ಚದಲ್ಲಿ ಹಾರ್ಪೂನ್ ಕ್ಷಿಪಣಿಗಳು ಮತ್ತು ಸಂಬಂಧಿತ ಉಪಕರಣಗಳು ಮತ್ತು ತೈವಾನ್‌ನ ಕಣ್ಗಾವಲು ರಾಡಾರ್ ಪ್ರೋಗ್ರಾಂ ಮತ್ತು ಸಂಬಂಧಿತ ಸಾಧನಗಳನ್ನು ಈ ಪ್ಯಾಕೇಜ್‌ ಒಳಗೊಂಡಿದೆ.

ಈ ಆದೇಶವು ಚೀನಾದ ಆಕ್ರಮಕ ಬೆದರಿಕೆಗಳಿಗೆ ವಿರೋಧಾಗಿ ತೈವಾನ್‌ ಗೆ ಅಮೆರಿಕದ ಬೆಂಬಲವನ್ನು ಸೂಚಿಸುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!