Monday, August 8, 2022

Latest Posts

ಅಮೆರಿಕ, ಯುರೋಪ್ ಸೇರಿ 12 ದೇಶಗಳಲ್ಲಿ ಕೊರೋನಾ ಮತ್ತೆ ಹೆಚ್ಚಳ: ಆತಂಕ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಅಮೆರಿಕದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಲಾರಂಭಿಸಿದ್ದು, ಹೊಸದಾಗಿ ದಿನನಿತ್ಯ 20 ಸಾವಿರಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗುತ್ತಿರುವುದು ಅಲ್ಲಿನ ಸರಕಾರವನ್ನು ಆತಂಕಕ್ಕೆ ತಳ್ಳಿದೆ.ಇದೇ ವೇಳೆ ಅಮೆರಿಕ, ಯುರೋಪ್ ಸೇರಿದಂತೆ ವಿಶ್ವದ 12 ದೇಶಗಳಲ್ಲಿ ಕೊರೋನಾ ಸೋಂಕು ಕಳವಳಕಾರಿಯಾಗಿ ಹೆಚ್ಚತೊಡಗಿದ್ದು, 111 ದೇಶಗಳಲ್ಲಿ ಡೆಲ್ಟಾ ರೂಪಾಂತರಿ ಹರಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.
ಕಳೆದ ವಾರಕ್ಕಿಂತ ಈ ವಾರ ಶೇ.44 ರಷ್ಟು ಕೇಸುಗಳು ಹೆಚ್ಚಾಗಿವೆ. ಕಳೆದ ವಾರ 28 ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳು ಏರಲಾರಂಭಿಸಿದ್ದರೆ, ಈ ವಾರ 44 ರಾಜ್ಯಗಳಲ್ಲಿ ಹೊಸದಾಗಿ ಕೋವಿಡ್ -19 ಪ್ರಕರಣಗಳು ಹೆಚ್ಚಲಾರಂಭಿಸಿದ್ದು, ಸಾವಿರಾರು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಈ ನಡುವೆ ಲಸಿಕೆ ನೀಡಿಕೆ ಪ್ರಮಾಣವೂ ಕಡಿಮೆಯಾಗಿದ್ದು, ಲಸಿಕೆ ಪಡೆಯದವರಲ್ಲಿ ಹೊಸದಾಗಿ ಸೋಂಕು ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ.
ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಕೊರೋನಾ ಸೋಂಕು ಮತ್ತೆ ತೀವ್ರಗೊಳ್ಳಲಾರಂಭಿಸಿದ್ದು, ಇದೀಗ ರಾಜಧಾನಿ ಸಿಡ್ನಿ ಬೆನ್ನಲ್ಲೇ ಮೆಲ್ಬೋರ್ನ್ ಮತ್ತು ವಿಕ್ಟೋರಿಯಾದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ. 1.2ಕೋಟಿ ಜನಸಂಖ್ಯೆಯ ಮೆಲ್ಬೋರ್ನ್‌ನಲ್ಲಿ ಜನರನ್ನು ಮನೆಯಿಂದ ಹೊರಬರಬಾರದೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ರಾಜಧಾನಿಯಲ್ಲಿ ಕಳೆದ ನಾಲ್ಕು ವಾರಗಳಿಂದ ಲಾಕ್‌ಡೌನ್ ಜಾರಿಯಲ್ಲಿದೆ.ಆಸ್ಟ್ರೇಲಿಯಾದಲ್ಲಿ 31,400 ಸೋಂಕು ಪ್ರಕರಣಗಳು ದಾಖಲಾಗಿದ್ದು, 912 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss