ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತಕ್ಕೆ ಕೊರೋನಾ ವಿರುದ್ಧ ಹೋರಾಡಲು ಅನೇಕ ರಾಷ್ಟ್ರಗಳು ಜೊತೆಯಾಗಿದ್ದು, ಇಂದು ಕುವೈತ್ ಹಾಗೂ ಅಮೆರಿಕ ಆಕ್ಸಿಜನ್ ಕಾಂಸೆಂಟೇಟರ್ಸ್ ಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿದೆ.
ಈ ಬಗ್ಗೆ ಮಾಹಿತಿ ತಿಳಿಸಿದ ಅರಿಂದಮ್ ಬಾಗ್ಚಿ ಅವರು, ಭಾರತ ಹಾಗೂ ಕುವೈತ್ ರಾಷ್ಟ್ರಗಳ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. 282 ಆಕ್ಸಿಜನ್ ಸಿಲಿಂಡರ್, 60 ಆಕ್ಸಿಜನ್ ಸಾಂದ್ರಕಗಳು, ವೆಂಟಿಲೇಟರ್ ಗಳು ಸೇರಿದಂತೆ ಇತರೆ ವೈದ್ಯಕೀಯ ಸಾಮಾಗ್ರಿಗಳನ್ನು ಕಳುಹಿಸಿದೆ. ಧನ್ಯವಾದ ಕುವೈತ್ ಎಂದು ಟ್ವೀಟ್ ಮಾಡಿದ್ದಾರೆ.
ಜೊತೆಗೆ ಅಮೆರಿಕದಿಂದ 5ನೇ ಹಂತದಲ್ಲಿ ವೈದ್ಯಕೀಯ ಉಪಕರಣಗಳು ಭಾರತಕ್ಕೆ ಬಂದು ತಲುಪಿದ್ದು, ಅದರಲ್ಲಿ 545 ಆಕ್ಸಿಜನ್ ಸಾಂದ್ರಕಗಳನ್ನು ಕಳುಹಿಸಿದೆ. ನಿಮ್ಮ ಬೆಂಬಲಕ್ಕೆ ಕೃತಜ್ಞತೆ ಎಂದು ತಿಳಿಸಿದ್ದಾರೆ.
🇮🇳🇰🇼
Deepening our fraternal ties of friendship. Thank Kuwait for shipment of 282 oxygen cylinders, 60 oxygen concentrators, ventilators and other medical supplies that arrived today. pic.twitter.com/roe34CmlnU— Arindam Bagchi (@MEAIndia) May 3, 2021