ಅಮೆರಿಕಾ ಯುವತಿ, ವಿಜಯಪುರ ಯುವಕ… ಮಾಂಗಲ್ಯ ತಂತು ನಾನೇನಾ ಅದ್ಧೂರಿ!!

ಹೊಸ ದಿಗಂತ ವರದಿ, ವಿಜಯಪುರ:

ಅಮೆರಿಕಾದ ಯುವತಿ, ನಗರದ ಯುವಕ ಹಿಂದು ಸಂಪ್ರದಾಯದಂತೆ ನಗರದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

ಉತ್ತರ ಅಮೆರಿಕಾದ ಸಾರಾ ಹಾಗೂ ನಗರದ ನಿವಾಸಿ ರವಿಕುಮಾರ ಚಿಮ್ಮಲಗಿ ಕೆನಡಾದ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುವಾಗ ಇಬ್ಬರಲ್ಲಿ ಪ್ರೇಮ ಅಂಕುರಗೊಂಡಿದ್ದು, ಪ್ರೇಮಿಗಳಿಬ್ಬರು ಹಸೆಮಣೆ ಏರಿದ್ದಾರೆ.

ನಗರದ ವಿಶ್ವನಾಥ ಚಿಮ್ಮಲಗಿ, ಶೋಭಾ ದಂಪತಿಯ ಪುತ್ರ ರವಿಕುಮಾರ ಹಾಗೂ ಕೆನಡಾದ ರೋಜ್‌ಮೇರಿ ಪ್ಲಾಟ್, ಹ್ಯಾರಿ ಪೋಲಾರ್ಡ್ ದಂಪತಿ ಪುತ್ರಿ ಸಾರಾ‌ ಪರಸ್ಪರ ಪ್ರೀತಿಸಿ, ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ಮದುವೆ ಆಗಿದ್ದಾರೆ.

ಮದುವೆ ದಿನ ವಧು ಸಾರಾ ಸೀರೆ ಉಟ್ಟು ಭಾರತೀಯ ನಾರಿಯಂತೆ ಕಂಗೊಳಿಸಿದ್ದು, ಆಕರ್ಷಣೀಯವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!