ಸಾರ್ವಜನಿಕವಾಗಿ ಬಂದೂಕು ಒಯ್ಯುವುದು ಯುಎಸ್‌ ನಾಗರೀಕರ ಮೂಲಭೂತ ಹಕ್ಕು: ಸುಪ್ರೀಂಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ʻಆತ್ಮರಕ್ಷಣೆಗಾಗಿ ಸಾರ್ವಜನಿಕವಾಗಿ ಬಂದೂಕು ತೆಗೆದುಕೊಂಡು ಹೋಗಬಹುದು, ಅದು ಅಮೆರಿಕನ್ನರ ಮೂಲಭೂತ ಹಕ್ಕುಗಳಲ್ಲಿ ಒಂದುʼ ಎಂದು ಅಮೆರಿಕಾ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ದೇಶಾದ್ಯಂತ ಗುಂಡೇಟಿನಿಂದ ನಡೆಯುತ್ತಿರುವ ಹಿಂಸಾಚಾರದ ತನಿಖೆಯ ವೇಳೆ ಈ ಆದೇಶವನ್ನು ಹೊರಹಾಕಿದೆ. ಶತಮಾನದ ಹಿಂದಿನ ನಿಯಮವಾಗಿರುವ ಕೈಬಂದೂಕುಗಳಿಗೆ ಕಾನೂನುಬದ್ಧ ನಿಯಮಗಳು ಅಗತ್ಯವಿದೆ.  ಮತ್ತು ಸರಿಯಾದ ಕಾರಣವಿಲ್ಲದೆ ಬಳಸಬಾರದೆಂಬ ಕಲ್ಪನೆಯನ್ನು ಕೋರ್ಟ್ ತಳ್ಳಿಹಾಕಿದೆ.

ನ್ಯಾಯಾಲಯದ ನಿಯಮಗಳ ಪ್ರಕಾರ, ವ್ಯಕ್ತಿ ಕಾನೂನುಬದ್ಧ ಸ್ವರಕ್ಷಣೆ ಅಗತ್ಯವಿದೆ ಎಂದು ಸಾಬೀತುಪಡಿಸಲು ಬಂದೂಕು ಪರವಾನಗಿಯನ್ನು ಪಡೆಯಬಹುದು. ಬಂದೂಕುಗಳನ್ನು ಹೊಂದಿರುವ ಜನರನ್ನು ನಿರ್ಬಂಧಿಸುವ ರಾಜ್ಯಗಳ ಕಾನೂನುಗಳಿಗೂ ಈ ತೀರ್ಪು ಬ್ರೇಕ್‌ ನೀಡಿದೆ. ಸಾರ್ವಜನಿಕವಾಗಿ ಬಂದೂಕುಗಳನ್ನು ಸಾಗಿಸಲು ಅಡ್ಡಿಪಡಿಸುವವರ ವಿರುದ್ಧ ತೀರ್ಪು ನೀಡಲಾಗಿದೆ.

ʻಸಂವಿಧಾನವುʼ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ ಎಂದು ಡೆಮಾಕ್ರಟಿಕ್ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ. ಸಾಮಾಜಿಕವಾಗಿ ನಾವು ಇನ್ನೂ ಏನಾದರೂ ಮಾಡಬೇಕು. ಅಮೆರಿಕನ್ನರನ್ನು ರಕ್ಷಣೆ ಮಾಡುವುದಕ್ಕಿಂತ ದೊಡ್ಡ ಕೆಲಸ ಇನ್ನೇನಿದೆ..?ಎಂದು ಪ್ರಶ್ನಿಸಿದ್ದಾರೆ.  ದೇಶಾದ್ಯಂತ ಅಮೆರಿಕನ್ನರು ಬಂದೂಕು ಸುರಕ್ಷತೆ ಬಗ್ಗೆ ಕರೆ ನೀಡಬೇಕಾಗಿದೆ ಎಂದು ಮನವಿ ಮಾಡಿದರು.

ಅಮೆರಿಕಾ ಕಾನೂನು ಏನು ಹೇಳುತ್ತೆ?
ಯಾವುದೇ ವ್ಯಕ್ತಿ ಸಾರ್ವಜನಿಕವಾಗಿ ಬಂದೂಕು ಒಯ್ಯುವುದಾದರೆ, ಆತ್ಮರಕ್ಷಣೆಗಾಗಿ ಎಂಬುದನ್ನು ಸಾಬೀತುಪಡಿಸಬೇಕು ಎಂದು ಅಮೆರಿಕಾ ಕಾನೂನು ಹೇಳುತ್ತದೆ. 2ನೇ ಮತ್ತು 14ನೇ ತಿದ್ದುಪಡಿ, ಮನೆಯ ಹೊರಗೆ ಆತ್ಮರಕ್ಷಣೆಗಾಗಿ ಬಂದೂಕು ಒಯ್ಯುವ ವ್ಯಕ್ತಿಯ ಹಕ್ಕನ್ನು ರಕ್ಷಿಸುತ್ತವೆ ಎಂಬುದನ್ನು ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!