ಪ್ರವಾಹದ ಬಿಕ್ಕಟ್ಟಿನ ನಡುವೆ ಕಾಡುತ್ತಿದೆ ಸೊಳ್ಳೆ ಕಾಟ: ಪರದೆ ಕಳುಹಿಸಿಕೊಡುವಂತೆ ಭಾರತಕ್ಕೆ ಪಾಕ್ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಪ್ರವಾಹದ ಬಿಕ್ಕಟ್ಟನು ಎದುರಿಸುತ್ತಿದ್ದು, ಇದರ ಜೊತೆಗೆ ಇದೀಗ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಹೀಗಾಗಿ ಭಾರತದಿಂದ 60 ಲಕ್ಷ ಪರದೆಗಳನ್ನು ಖರೀದಿಸಲು ಪಾಕ್ ಸರ್ಕಾರ ನಿರ್ಧರಿಸಿದೆ.
ಪಾಕಿಸ್ತಾನದ 32 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಿದೆ.ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದ್ದು, ಮಲೇರಿಯಾ ಹರಡುತ್ತಿದೆ. ಹೀಗಾಗಿ ನಾಗರಿಕರನ್ನು ರಕ್ಷಿಸುವ ಸಲುವಾಗಿ ಸೊಳ್ಳೆ ಪರದೆಯ ಅವಶ್ಯಕತೆ ಇದೆ. ನವಂಬರ್ ಮಧ್ಯ ಭಾಗದಲ್ಲಿ ವಾಘಾ ಗಡಿಯ ಮೂಲಕ ಭಾರತದಿಂದ ಸೊಳ್ಳೆ ಪರದೆಗಳು ಪಾಕಿಸ್ತಾನ ತಲುಪುವ ಭರವಸೆ ಇದೆ ಎಂದು ಪಾಕಿಸ್ತಾನದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಹವಾಮಾನ ವೈಪರಿತ್ಯದಿಂದ ಪಾಕಿಸ್ತಾನದಲ್ಲಿ ವಿಪತ್ತು ಸಂಭವಿಸಿದೆ. ಪ್ರವಾಹದಿಂದಾಗಿ ಪಾಕಿಸ್ತಾನದಲ್ಲಿ ಈಗಾಗಲೇ 1600 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದು ತಿಂಗಳು ವಿಶ್ವ ಆರೋಗ್ಯ ಸಂಸ್ಥೆ (WHO) ಪಾಕಿಸ್ತಾನದಲ್ಲಿ ಉಂಟಾದ ಪ್ರವಾಹದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!