ಕಾಶ್ಮೀರದಲ್ಲಿ ಆಜಾನ್‌ ಕೇಳಿ ಭಾಷಣ ನಿಲ್ಲಿಸಿ ಗೌರವ ನೀಡಿದ ಅಮಿತ್​ ಶಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಬುಧವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದಾಗ ಆಜಾನ್‌ ಕೇಳಿ ತಮ್ಮ ಭಾಷಣವನ್ನು ನಿಲ್ಲಿಸಿ ಗೌರವ ಸಲ್ಲಿಸಿದ್ದಾರೆ.

ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಸಭೆಯಲ್ಲಿ ಅಮಿತ್​ ಶಾ ಮಾತನಾಡಿದ್ದರು. ಈ ವೇಳೆ, ಸಮೀಪದ ಮಸೀದಿಯಿಂದ ಆಜಾನ್‌ ಮೊಳಗಿತು. ತಕ್ಷಣವೇ ಶಾ ತಮ್ಮ ಭಾಷಣವನ್ನು ನಿಲ್ಲಿಸಿದ್ದು, ಸಭೆಯಲ್ಲಿ ನೆರೆದಿದ್ದ ಜನರು ಚಪ್ಪಾಳೆ ತಟ್ಟಿದರು.

ಆಜಾನ್ ಮುಗಿದ ನಂತರ ಅಮಿತ್ ಶಾ ತಮ್ಮ ಭಾಷಣವನ್ನು ಪುನರಾರಂಭಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!