Monday, July 4, 2022

Latest Posts

ಬಂಗಾಳದಲ್ಲಿ ಚಾಣಕ್ಯನ ಅಸ್ತ್ರ: ಇಂದು ಒಂದೇ ದಿನ 6 ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಶಾ ಭಾಗಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಗೃಹ ಸಚಿವ ಅಮಿತ್ ಶಾ ಅವರು ಆರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

ಮಧ್ಯಾಹ್ನ 12:20ಕ್ಕೆ ಶಾಂತಿಪುರ್, 1:30ಕ್ಕೆ ರಾಣಾಘಾಟ್ ದಕ್ಷಿಣ, 3:40ಕ್ಕೆ ಬಾಸಿರ್ಹಟ್ ದಕ್ಷಿಣ, 4:25ಕ್ಕೆ ಪಾನಿಹಾಟಿ, ಸಂಜೆ 5:30ಕ್ಕೆ ಕಮರ್ ಹಟಿ ಹಾಗೂ 7 ಗಂಟೆಗೆ ರಾಜರ್ ಹಟ್ ಗೋಪಾಲ್ ಪುರ್ ನಲ್ಲಿ ನಡೆಯಲಿರುವ ಚುನಾವಣಾ ಪ್ರಚಾರಗಳಲ್ಲಿ ಭಾಗಿಯಾಗಲಿದ್ದಾರೆ. ಇವತ್ತಿನ 6 ಕಾರ್ಯಕ್ರಮಗಳಲ್ಲಿ 2 ಕಡೆಗಳಲ್ಲಿ ರೋಡ್ ಶೋ ನಡೆಯಲಿದೆ.

ಈಗಾಗಲೇ ಬಂಗಾಳದಲ್ಲಿ 4 ಹಂತಗಳ ಚುನಾವಣೆ ನಡೆದಿದ್ದು, ಏಪ್ರಿಲ್ 17ರಂದು 5ನೇ ಹಂತದ ಚುನಾವಣೆ ನಡೆಯಲಿದೆ. ಮುಂದಿನ ಹಂತಗಳು ಏ.22, ಏ.26 ಹಾಗೂ ಏ. 29ಕ್ಕೆ ನಡೆಯಲಿದೆ. ಮೇ.2 ರಂದು ಚುನಾವಣಾ ಫಲಿತಾಂಶ ಹೊರಬರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss