Monday, June 27, 2022

Latest Posts

ಪಾನ್​ ಮಸಾಲಾ ಬ್ರ್ಯಾಂಡ್ ಜಾಹೀರಾತಿನಿಂದ ಹಿಂದೆ ಸರಿದ ಅಮಿತಾಭ್ ಬಚ್ಚನ್!

ಹೊಸದಿಗಂತ ಆನ್ ಲೈನ್ ಡೆಸ್ಕ್

ಬಾಲಿವುಡ್​ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಇಂದು ಜನ್ಮದಿನದ ಸಡಗರ. ಈ ವೇಳೆ ಅವರು ಅಭಿಮಾನಿಗಳಿಗೆ ಉಡುಗೊರೆ ಒಂದು ನೀಡಿದ್ದಾರೆ.
ಪಾನ್​ ಮಸಾಲಾ ಬ್ರ್ಯಾಂಡ್​ನ ಜಾಹೀರಾತುಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿರುವ ಬಚ್ಚನ್​, ತನ್ಮೂಲಕ ತಂಬಾಕು ವಿರೋಧಿ ಸಂಘಟನೆಗಳ ಮನವಿಗೆ ಮಾನ್ಯತೆ ನೀಡಿದ್ದಾರೆ.
ಇತ್ತೀಚೆಗೆ ಕಮಲಾ ಪಸಂದ್​ ಪಾನ್​ ಮಸಾಲಾದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಿಗ್​ ಬಿಗೆ ರಾಷ್ಟ್ರೀಯ ತಂಬಾಕು ವಿರೋಧಿ ಸಂಘಟನೆಯೊಂದು ಆ ಜಾಹೀರಾತಿನಿಂದ ಹೊರಬರುವಂತೆ ಆಗ್ರಹಿಸಿ ಪತ್ರ ಬರೆದಿತ್ತು.
ಪಾನ್​ ಮಸಾಲಾದಿಂದ ಜನರ ಆರೋಗ್ಯಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಸರ್ಕಾರದ ಪಲ್ಸ್​ ಪೋಲಿಯೋ ಅಭಿಯಾನದ ರಾಯಭಾರಿಯಾದ ಬಚ್ಚನ್ ಈ ತೆರನ ಜಾಹೀರಾತು ಮಾಡಬಾರದು ಎಂದಿತ್ತು. ಬಚ್ಚನ್​ರ ಹಲವು ಅಭಿಮಾನಿಗಳೂ ಸಾಮಾಜಿಕ ಮಾಧ್ಯಮದಲ್ಲಿ ಪಾನ್​ ಮಸಾಲಾ ಜಾಹೀರಾತಿನಲ್ಲಿ ಭಾಗವಹಿಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು .
ಈ ಹಿನ್ನೆಲೆಯಲ್ಲಿ ಕಳೆದ ವಾರ ಬಚ್ಚನ್​, ಪಾನ್​ ಮಸಾಲಾ ಕಂಪೆನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಅಂತ್ಯಗೊಳಿಸಿದ್ದು, ಅವರು ಜಾಹೀರಾತಿಗಾಗಿ ನೀಡಿದ ಹಣವನ್ನು ಹಿಂತಿರುಗಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಪಾನ್​ ಮಸಾಲಾ ಜಾಹೀರಾತು ‘ಸರ್ರೊಗೇಟ್​ ಅಡ್ವರ್ಟೈಸಿಂಗ್​’ ಅಂದರೆ ನಿಷೇಧಿತ ವಸ್ತುಗಳ ಪ್ರಚಾರ ಮಾಡಿದಂತೆ ಎಂಬುದು ತಮಗೆ ಗೊತ್ತಿರಲಿಲ್ಲ ಎಂದು ಬಚ್ಚನ್ ಹೇಳಿದ್ದಾರೆ.
ನ್ಯಾಷನಲ್ ಆರ್ಗನೈಸೇಷನ್ ಫಾರ್ ಟೊಬಾಕೊ ಎರಾಡಿಕೇಷನ್​(NOTE)ನ ಅಧ್ಯಕ್ಷರಾಗಿರುವ ಕ್ಯಾನ್ಸರ್​ ತಜ್ಞ ಡಾ. ಶೇಖರ್ ಸಲ್ಕಾರ್​, ‘ಬಚ್ಚನ್​​ ಅವರು ಯೂತ್​ ಐಕಾನ್​ ಆಗಿದ್ದು, ಅವರ ಈ ಹೆಜ್ಜೆ ಯುವ ಜನಾಂಗದ ಮನಃಪರಿವರ್ತನೆಗೆ ಸಹಾಯಕವಾಗುತ್ತದೆ’ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss