spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

`ಕೌನ್​ ಬನೇಗಾ ಕರೋಡ್‌​ಪತಿ’ ಶೋನಲ್ಲಿ ಬಿಗ್​ ಬಿ ಬಾಯಲ್ಲೂ ಹರಿದಾಡಿದ ಕನ್ನಡದ ಈ ಸಿನಿಮಾ!

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ನಟಿ ಮಿಲನಾ ನಾಗರಾಜ್ ಮತ್ತು ನಟ ಪೃಥ್ವಿ ಅಂಬರ್​ ಅಭಿನಯದ ಫಾರ್​ REGN’ ಶೂಟಿಂಗ್‌ ಕೆಲಸಗಳು ಈಗಾಗಲೇ ಭರದಿಂದ ಸಾಗಿದೆ. ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಕೂಡ ಹೆಚ್ಚಾಗಿದೆ.

ಈ ನಡುವೆ ಈ ನಡುವೆ ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿಯೂ ಈ ಸಿನಿಮಾ ಬಗ್ಗೆ ಮಾತುಕತೆ ನಡೆದಿದೆ.  ‘ಕೌನ್ ಬನೇಗಾ ಕರೋಡ್‌ಪತಿ’ ಶೋನಲ್ಲಿ ನವೀನ್ ದ್ವಾರಕನಾಥ್ ಅವರು ಅಮಿತಾಭ್ ಭೇಟಿ ಮಾಡಿದ್ದಾರೆ. ‘ಫಾರ್ REGN’ ಚಿತ್ರದ ಕುರಿತು ಅವರು ಮಾತನಾಡಿ , ಅಮಿತಾಭ್‌ರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ.

“ಇದು ನನ್ನ ಜೀವನದ ಅತ್ಯಂತ ಸಂತೋಷದ ದಿನ” ಎಂದು ನವೀನ್ ದ್ವಾರಕನಾಥ್ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೆ ‘ಫಾರ್ REGN’ ಚಿತ್ರದ ನಿರ್ಮಾಣ ಕಾರ್ಯ ಮತ್ತೆ ಪ್ರಾರಂಭವಾಗಿದ್ದು ಚಿತ್ರದ ಮೂರನೇ ಹಂತದ ಚಿತ್ರೀಕರಣ ಮುಗಿದಿದೆ. ಅದರ ಬೆನ್ನಲೇ ಈ ಖುಷಿಯ ಸುದ್ದಿ ಸಿಕ್ಕಿದೆ.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap