ಎರಡು ಪದಾರ್ಥ ಬಳಸಿ ಬೆಟ್ಟದ ನೆಲ್ಲಿಕಾಯಿ ಕ್ಯಾಂಡಿ ತಯಾರಿಸಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮರದ ನೆಲ್ಲಿ ಆದರೆ ಎಲ್ಲರೂ ಇಷ್ಟಪಡ್ತಾರೆ. ಉಪ್ಪು, ನೆಲ್ಲಿ ಕಾಂಬಿನೇಷನ್‌ ಸೂಪರ್.‌ ಆದರೆ ಬೆಟ್ಟದ ನೆಲ್ಲಿಕಾಯಿ ಅಂದರೆ ಸಾಕಷ್ಟು ಜನ ಮೂಗು ಮುರಿಯುತ್ತಾರೆ. ಯಾಕಂದರೆ ಅದು ಒಗರಿನಿಂದ ಕೂಡಿರುತ್ತದೆ. ಉಪ್ಪಿನಕಾಯಿ ಹಾಕಿದ್ರೆ ಮಾತ್ರ ತಿನ್ನಲು ರುಚಿಕರ. ಇದೀಗ ಕ್ಯಾಂಡಿ ತಯಾರಿಸಿದ್ರೆ ಇನ್ನೂ ರುಚಿಯಾಗಿರುತ್ತದೆ. ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಕೇವಲ ಎರಡು ಪದಾರ್ಥಗಳಿಂದ ಈ ಕ್ಯಾಂಡಿ ತಯಾರಿಸಬಹುದು. ಹಾಗಾದರೆ ಬನ್ನಿ ಮಾಡೋಣ.

ಬೇಕಾಗುವ ಪದಾರ್ಥಗಳು
10 – 12 ನೆಲ್ಲಿಕಾಯಿ
1/2 ಕಪ್ ಸಕ್ಕರೆ
1/4 ಟೀಸ್ಪೂನ್ ಉಪ್ಪು

ಮಾಡುವ ವಿಧಾನ:
ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆಯಿರಿ. ಹತ್ತು ನಿಮಿಷ ಅಥವಾ ಮೆತ್ತಗಾಗುವವರೆಗೆ ಆವಿಯಲ್ಲಿ ಇಡ್ಲಿ ಬೇಯಿಸಿದ ಹಾಗೆ ಬೇಯಿಸಿ. ಸ್ವಲ್ಪ ಬಿಸಿ ಆರಿದ ಮೇಲೆ ನೆಲ್ಲಿಕಾಯಿಯನನು ಉದ್ದಕ್ಕೆ ಸೀಳಿ ಬೀಜ ತೆಗೆಯಿರಿ. ಅದಕ್ಕೆ 1/4 ಕಪ್ ಸಕ್ಕರೆ ಮತ್ತು 1/4 ಸ್ಪೂನ್‌ ಉಪ್ಪು ಹಾಕಿ ಕಲಸಿ 5 – 6 ಗಂಟೆ ಪಕ್ಕಕ್ಕಿಡಿ. ನೆಲ್ಲಿಕಾಯಿ ಬಿಟ್ಟ ನೀರನ್ನು ಬಸಿದು ತೆಗೆಯಿರಿ. ಪುನಃ ಅದಕ್ಕೆ 1/4 ಕಪ್ ಸಕ್ಕರೆ ಹಾಕಿ ಕಲಸಿ. 2 – 3 ದಿನ ಬಿಸಿಲಿನಲ್ಲಿ ಒಣಗಲು ಬಿಡಿ. ಚನ್ನಾಗಿ ಒಣಗಿದರೆ ವರ್ಷವಿಡೀ ತಿನ್ನಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!