ಅಮೃತಯಾತ್ರೆ: ಭಾರತದ ಮಹಿಳೆಯರ ಬದುಕನ್ನು ʼಉಜ್ವಲಿʼಸಿದ್ದು ಹೀಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತ ಪರಕೀಯರ ಆಡಳಿತದಿಂದ ಮುಕ್ತಗೊಂಡು 75 ವರ್ಷಗಳು ಪೂರ್ಣಗೊಂಡಿವೆ. ಈ ಸ್ವಾತಂತ್ರ್ಯದ ಅಮೃತಕಾಲದಲ್ಲಿ ಅನೇಕ ವಿಷಯಗಳಲ್ಲಿ ಅಭಿವೃದ್ಧಿ ಸಾಧಿಸಲಾಗಿದೆ. ಅವುಗಳಲ್ಲಿ ಮನೆ ಮನೆಗೂ ಶುದ್ಧ ಅಡುಗೆ ಇಂಧನವನ್ನು ಖಾತ್ರಿಪಡಿಸಿದ್ದು ಕೂಡ ಒಂದು. ಮನೆ ಮನೆಗೂ ಎಲ್‌ಪಿಜಿ ಸಂಪರ್ಕವ ನೀಡುವ ಮೂಲಕ ಭಾರತದ ಮಹಿಳೆಯರಿಗೆ ಸೌದಿ, ಇದ್ದಿಲು ಒಲೆಗಳ ಹೊಗೆಯಿಂದ ಶಾಶ್ವತವಾಗಿ ಮುಕ್ತಿಕೊಡಲಾಗಿದೆ. ಸಿಲಿಂಡರ್‌ ಸಂಪರ್ಕದ ಮೂಲಕ ಅವರ ಬದುಕು ಹಸನಾಗಿಸಲಾಗಿದೆ.

1960ರ ದಶಕದ ರವೆಗೂ ಭಾರತದಲ್ಲಿ ಎಲ್‌ಪಿಜಿ ಸಂಪರ್ಕ ಹೊಂದಿರುವವರ ಸಂಖ್ಯೆ ತೀರಾ ಕಡಿಮೆಯಿತ್ತು. 1965ರಲ್ಲಿ ಮೊದಲಬಾರಿಗೆ ಎರಡು ಸಾವಿರ ಮಂದಿಗೆ ಪ್ರಾಯೋಗಿಕವಾಗಿ ಎಲ್‌ಪಿಜಿ ಸಂಪರ್ಕ ನೀಡಲಾಯಿತು. ಆ ನಂತರದಲ್ಲಿ 1990ದಶಕದ ಹೊತ್ತಿಗೆ ಈ ಸಂಖ್ಯೆ 1.62 ಕೋಟಿಗೆ ತಲುಪಿದೆ. ನಂತರದಲ್ಲಿ ಈ ಪ್ರಕ್ರಿಯೆಗೆ ವೇಗ ಬಂದಿದ್ದು 2010ರ ನಂತರ.

ಮಹಿಳೆಯರು ಮತ್ತು ಮಕ್ಕಳ ಆರೋಗ್ಯವನ್ನು ಖಾತ್ರಿಪಡಿಸುವಲ್ಲಿ ಶುದ್ಧ ಇಂಧನವನ್ನು ನೀಡುವ ದೃಷ್ಟಿಯಿಂದ 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದು ದೇಶದ ಎಲ್‌ಪಿಜಿ ಸಂಪರ್ಕಕ್ಕೆ ವೇಗವನ್ನು ಒದಗಿಸಿತು. ಕಳೆದ ಆರು ವರ್ಷಗಳಲ್ಲಿ PMUY ಅಡಿಯಲ್ಲಿ 9 ಕೋಟಿಗೂ ಹೆಚ್ಚು LPG ಸಂಪರ್ಕಗಳನ್ನು ಕಲ್ಪಿಸಲಾಗಿದೆ. ಆ ಮೂಲಕ ಮನೆ ಮನೆಗೂ ಶುದ್ಧ ಇಂಧನ ಸರಬರಾಜಿಗೆ ಪ್ರಾಮುಖ್ಯತೆ ನೀಡಲಾಗಿದೆ.‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!