ಅಮೃತಯಾತ್ರೆ: ಅನಕ್ಷರತೆಯಿಂದ ಸಾಕ್ಷರತೆಯೆಡೆಗೆ ಸಾಗಿದ ಕತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಅಮೃತಯಾತ್ರೆಯ ಸಂದರ್ಭದಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳಬಲ್ಲ ಸಾಧನೆಗಳಲ್ಲೊಂದು ಭಾರತ ಸಾಕ್ಷರತೆಯೆಡೆಗೆ ಸಾಗಿದ ಪ್ರಯಾಣ. ಪ್ರಾಚೀನ ಭಾರತದಲ್ಲಿನ ಶಿಕ್ಷಣ ಹೇಗಿತ್ತು ಎಂಬುದು ತೆರೆದಿಟ್ಟ ಸತ್ಯ ಒಂದೆಡೆಯಾದರೆ, ನಂತರದ ಕಾಲಘಟ್ಟದಲ್ಲಿ 200 ವರ್ಷಗಳಲ್ಲಿ ಪರಕೀಯರ ದಬ್ಬಾಳಿಕೆಗೆ ಸಿಲುಕಿದ ಭಾರತದಲ್ಲಿ ಅಕ್ಷರಸ್ಥರಿಗಿಂತ ಅನಕ್ಷರತೆಯ ಪ್ರಮಾಣವೇ ಜಾಸ್ತಿಯಿತ್ತು.

ಆದರೆ ಸ್ವಾತಂತ್ರ್ಯಾನಂತರದಲ್ಲಿ ಹೆಚ್ಚಿನ ಪ್ರಾಶಸ್ತ್ಯಕೊಟ್ಟು ದೇಶದಲ್ಲಿ ಶಿಕ್ಷಣದಿಂದ ವಂಚಿತರಾಗಿರುವವರಿಗೆ ಶಿಕಗಷಣ ಕೊಡುವುದರ ಜೊತೆಗೆ ರಾತ್ರಿ ಶಾಲೆಗಳ ಮೂಲಕ ವಯಸ್ಕರಿಗೂ ಶಿಕ್ಷಣ ಕೊಡಲಾಯಿತು. ಸರ್ವಶಿಕ್ಷಾ ಅಭಿಯಾನದಂತಹ ಕಾರ್ಯಕ್ರಮಗಳ ಮೂಲಕ ಪರಿಪೂರ್ಣ ಸಾಕ್ಷರತೆ ಸಾಧಿಸುವ ಗುರಿ ಹೊಂದಲಾಯಿತು.

1951ರಲ್ಲಿ ಒಟ್ಟಾರೆ ಸಾಕ್ಷರತಾ ಪ್ರಮಾಣ ಕೇವಲ 18.3 ಶೇಕಡಾದಷ್ಟಿತ್ತು. ಅದರಲ್ಲಿ ಪುರುಷರು 27.2 ಶೇ. ಸಾಕ್ಷರತೆ ಹೊಂದಿದ್ದರೆ ಮಹಿಳೆಯರು 8.9 ಶೇ.ರಷ್ಟು ಸಾಕ್ಷರತೆ ಹೊಂದಿದ್ದರು. ಇದು 2018ರ ಹೊತ್ತಿಗೆ 74.4 ಶೇಕಡಾದಷ್ಟು ಸಾಧಿಸಲಾಯಿತು. 2018ರಲ್ಲಿ ಪುರುಷರಲ್ಲಿ 82.4 ಶೇ. ಹಾಗೂ ಮಹಿಳೆಯರಲ್ಲಿ 65.8 ಶೇ. ಸಾಕ್ಷರತಾ ದರ ದಾಖಲಾಗಿರುವುದು 75 ವರ್ಷಗಳಲ್ಲಿ ಭಾರತದ ಸಾಧನೆಯನ್ನು ತೋರಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!