ಅಮೃತಯಾತ್ರೆ: ರೇಲ್ವೇಯಿಂದ ಹೀಗೊಂದು ಸರಕು ಸಾಗಣೆ ಕ್ರಾಂತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಗತ್ತಿನಲ್ಲಿಯೇ ಅತಿ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಖ್ಯಾತಿಗೆ ಪಾತ್ರವಾಗಿರೋ ಭಾರತೀಯ ರೇಲ್ವೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸರಕು ಸಾಗಣೆಯಲ್ಲಿ ಸಾಧಿಸಿರೋ ಕ್ರಾಂತಿಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಭಾರತದ ಅಭಿವೃದ್ಧಿಯಲ್ಲಿ ಸರಕುಸಾಗಣೆ ಕ್ಷೇತ್ರದ್ದೂ ಪಾಲಿದೆ. ರೇಲ್ವೇಯು ಈ ನಿಟ್ಟಿನಲ್ಲಿ ಅತ್ಯಂತ ಅಗ್ಗದ ಹಾಗು ವೇಗದ ಸಾಗಣೆ ಮಾಡಲು ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ. ಇಂದು ಭಾರತದಲ್ಲಿ ರೇಲ್ವೇ ಅತ್ಯಂತ ಜನಪ್ರಿಯ ಸರಕು ಸಾಗಣೆ ಮಾಧ್ಯಮವಾಗಿ ಹೊರ ಹೊಮ್ಮಿದೆ.

ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ಬಂದ ನಂತರದಿಂದ ಇಲ್ಲಿಯ ವರೆಗೆ ರೇಲ್ವೇಯ ಸರಕು ಸಾಗಣೆ ಬೆಳೆದು ಬಂದ ಹಾದಿಯನ್ನು ಗಮನಿಸುವುದಾದರೆ 1950-51ರ ಸಮಯದಲ್ಲಿ 37.5 ಎನ್‌ಟಿಕಿಮಿ ಗಳಷ್ಟು ಸರಕು ಸಾಗಣೆ ಮಾಡಲಾಗಿತ್ತು. ನಂತರದಲ್ಲಿ ಉತ್ತಮ ಬೋಗಿಗಳ ನಿರ್ಮಾಣ, ಹಳಿಗಳ ವಿಸ್ತರಣೆ ಇತ್ಯಾದಿ ರೇಲ್ವೇ ಸುಧಾರಣೆಗೆ ತೆಗೆದುಕೊಂಡ ಕ್ರಮಗಳಿಂದಾಗಿ ಈ ಸಂಖ್ಯೆ ಯಲ್ಲಿ ಏರಿಕೆಯಾಗಿದೆ. 2020-21ರ ಹೊತ್ತಿಗೆ 719.8 ಎನ್‌ಟಿಕಿಮಿ ಗಳಷ್ಟು ಸರಕು ಸಾಗಣೆ ಸಾಧಿಸಲಾಗಿದೆ. ಹೆಚ್ಚು ಕಡಿಮೆ 19 ಪಟ್ಟು ಏರಿಕೆ ದಾಖಲಾಗಿದೆ. ವರ್ಷದಿಂದ ವರ್ಷಕ್ಕೆ ದಾಖಲೆಯ ಪ್ರಮಾಣದಲ್ಲಿ ರೇಲ್ವೆಯು ಸರಕು ಸಾಗಣೆ ಮಾಡುತ್ತಿದೆ. ಉತ್ತಮ ಸರಕು ಸಾಗಣೆ ಕಲ್ಪಿಸಲು ಉಕ್ಕಿನ ಬೋಗಿಗಳನ್ನೂ ಜೋಡಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!