ಅಮೃತಯಾತ್ರೆ: ಈಶಾನ್ಯ ಭಾರತದಲ್ಲಿ ಅಭಿವೃದ್ಧಿಯ ಹೊಸ ಪರ್ವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಹೊತ್ತಲ್ಲಿ ಈಶಾನ್ಯ ಭಾರತದಲ್ಲಾಗುತ್ತಿದ್ದ ದಂಗೆಗಳನ್ನು ಹತ್ತಿಕ್ಕಿ ಆ ಭಾಗದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಿ, ಅಭಿವೃದ್ಧಿಯ ಹೊಸ ಶಕೆ ಪ್ರಾರಂಭಿಸಿದ್ದೂ ಕೂಡ ನೆನಪಿಸಿಕೊಳ್ಳಬೇಕಾದ ಸಾಧನೆ.

ಸ್ವಾತಂತ್ರ್ಯ ಬಂದು ವರ್ಷಗಳೇ ಕಳೆದಿದ್ದರೂ ಈಶಾನ್ಯ ಭಾರತದಲ್ಲಿ ಮಾತ್ರ ಶಾಂತಿಯಿರಲಿಲ್ಲ. ಪ್ರಾದೇಶಿಕತೆ, ದಂಗೆ, ಭಯೋತ್ಪಾದನೆಯಂತ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದವು. ಅಲ್ಲಿನ ಸ್ಥಳೀಯ ಕೆಲ ಬಂಡಾಯ ಗುಂಪುಗಳು ಭಾರತದ ಸರ್ಕಾರದ ವಿರುದ್ಧವೇ ನಿರಂತರವಾಗಿ ದಂಗೆ ನಡೆಸಿ ಶಾಂತಿ ಕದಡುತ್ತಿದ್ದರು. ಹೀಗಾಗಿ ಈಶಾನ್ಯ ಭಾರತ ಅಭಿವೃದ್ಧಿಯಿಂದ ಹಿಂದುಳಿದಿತ್ತು. ಅದಲ್ಲದೇ ಗಡಿಯಲ್ಲಿನ ತಂಟೆಗಳೂ ಕೂಡ ದೇಶಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.

ಆದರೆ ಕಳೆದೊಂದು ದಶಕದಿಂದ ಈ ಕುರಿತು ನಿರಂತರ ಪ್ರಯತ್ನ ನಡೆಸಿ ಅಲ್ಲಿನ ಸ್ಥಳೀಯ ದಂಗೆಕೋರರೊಂದಿಗೆ ಮಾತುಕತೆ ನಡೆಸಿ ಶಾಂತಿ ಸ್ಥಾಪನೆಗೆ ಒತ್ತು ನೀಡಲಾಗಿದೆ. ಬೋಡೋ ಶಾಂತಿ ಒಪ್ಪಂದಂತಹವುಗಳ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಶಾಂತಿಯ ವಾತಾವರಣ ಸೃಷ್ಟಿಸಲಾಗಿದೆ. ಈ ಭಾಗದಲ್ಲಿ 2000-05ನೇ ಇಸವಿಯ ನಡುವೆ 8515 ದಂಗೆಯ ಪ್ರಕರಣಗಳು ದಾಖಲಾಗಿತ್ತು. ಶಾಂತಿ ಒಪ್ಪಂದಗಳ ಪರಿಣಾಂ ಈ ಸಂಖ್ಯೆ ಗಣನೀಯವಾಗಿ ಕುಸಿದಿದೆ. 2018-21ರ ನಡುವೆ ಕೇವಲ 847 ಪ್ರಕರಣಗಳು ದಾಖಲಾಗಿವೆ.

ಈ ಭಾಗದಲ್ಲಿ ಶಾಂತಿ ಸ್ಥಾಪಿಸಿದಲ್ಲದೇ ಅಭಿವೃದ್ಧಿಯೆಡೆಗೆ ಹೆಚ್ಚಿನ ಆಸ್ಥೆವಹಿಸಲಾಗುತ್ತಿದೆ. ರಸ್ತೆಗಳ ನಿರ್ಮಾಣ, ಶಿಕ್ಷಣ, ಆರೋಗ್ಯ, ವಿದ್ಯುತ್‌ ಸಂಪರ್ಕ ಹೀಗೆ ಹಲವು ಆಯಾಮಗಳಲ್ಲಿ ಈ ಭಾಗದ ಜನರ ಬದುಕು ಹಸನಾಗಿಸಲು ಮುತುವರ್ಜಿವಹಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!