ಅಮೃತಯಾತ್ರೆ: ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು, ಪ್ರಾಥಮಿಕ ಶಿಕ್ಷಣಪಡೆದವರಲ್ಲಿ ಬಾಲಕಿಯರದ್ದೇ ಮೇಲುಗೈ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೃತಯಾತ್ರೆಯ ಸಂದರ್ಭದಲ್ಲಿ ಭಾರತವು ಅನಕ್ಷರತೆಯಿಂದ ಸಾಕ್ಷರೆತೆಯೆಡೆಗೆ ಸಾಗಿದ ಪ್ರಯಾಣ ಅನನ್ಯವಾದುದು. ಅದರಲ್ಲೂ ವಿಶೇಷವಾಗಿ ಸರ್ವಶಿಕ್ಷಾ ಅಭಿಯಾನಗಳಂಥವುಗಳ 14 ವರ್ಷದ ವರೆಗೆ ಶಿಕ್ಷಣವನ್ನು ಕಡ್ಡಾಯಗೊಳಿಸಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿ ದೇಶವನ್ನು ಸಾಕ್ಷರತೆಯೆಡೆಗೆ ಕೊಂಡೊಯ್ಯಲಾಗುತ್ತಿದೆ.

ಅದರಲ್ಲಿಯೂ ಪ್ರಾಥಮಿಕ ಶಿಕ್ಷಣ ಪಡೆಯುವುದರಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಲಿಂಗ ಅಮಾನತೆಯನ್ನು ಹೋಗಲಾಡಿಸುವ ಮೂಲಕ ಭಾರತವು ಶಿಕ್ಷಣದಿಂದ ವಂಚಿತರಾಗುತ್ತಿದ್ದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಸಫಲವಾಗಿದೆ.

1951 ರ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಲಿಂಗ ಸಮಾನತೆ ಸೂಚ್ಯಂಕವು 0.22 ರಷ್ಟಿತ್ತು. ಅಂದರೆ 10 ಬಾಲಕರಿಗೆ ಹೋಲಿಸಿದರೆ ಕೇವಲ ಎರಡು ಬಾಲಕಿಯರು ಮಾತ್ರ ಪ್ರಾಥಮಿಕ ಶಿಕ್ಷಣ ಪಡೆಯುವಲ್ಲಿ ಸಫಲರಾಗುತ್ತಿದ್ದರು.

ಆದರೆ 2022ರ ಹೊತ್ತಿಗೆ ಈ ಅಂತರವು ದೂರವಾಗಿದ್ದು ಲಿಂಗ ಅಂತರವು 1.01ರಷ್ಟಿದೆ. ಶಾಲೆಗಳಲ್ಲಿ ಲಿಂಗ ಸಮಾನತೆ ಸಾಧಿಸುವಲ್ಲಿ ಭಾರತ ಅತ್ಯುತ್ತಮ ಪ್ರಗತಿಯನ್ನು ತೋರಿದೆ. 1950-51ರಲ್ಲಿ ಶಾಲಾ ಶಿಕ್ಷಣದಲ್ಲಿ ವ್ಯಾಪಕವಾದ ಲಿಂಗ ಅಸಮಾನತೆಯ ದೂರವಾಗಿದ್ದು ಬಾಲಕರಿಗಿಂತ ಬಾಲಕಿಯರೇ ಹೆಚ್ಚು ದಾಖಲಾತಿ ಪಡೆದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!