ಅಮೃತಯಾತ್ರೆ: ಮೂರುದಶಕಗಳಲ್ಲಿ ಮೂರುಪಟ್ಟು ಹೆಚ್ಚಾಗಿದೆ ತೋಟಗಾರಿಕಾ ಉತ್ಪಾದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕೃಷಿ ಪ್ರಧಾನ ದೇಶವಾಗಿರೋ ಭಾರತದಲ್ಲಿ ತೋಟಗಾರಿಕೆಯು ಹಲವಾರು ಜನರ ಮುಖ್ಯ ಕಸುಬು. ಆಹಾರಧಾನ್ಯಗಳ ಜತೆ ತರಕಾರಿಗಳು, ಮಸಾಲೆಗಳು, ವಾಣಿಜ್ಯಬೆಳೆಗಳಾದ ಅಡಿಕೆ, ತೆಂಗು ಇತ್ಯಾದಿಗಳ ಬೆಳೆಯಲ್ಲೂ ಭಾರತೀಯ ಕೃಷಿಕರು ಸೈ ಎನಿಸಿಕೊಂಡಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರೋ ಹೊತ್ತಿಗೆ ತೋಟಗಾರಿಕೆ ಕ್ಷೇತ್ರದಲ್ಲಾದ ಗಮನಾರ್ಹ ಸಾಧನೆಯ ಬಗ್ಗೆಯೂ ತಿಳಿದುಕೊಳ್ಳಬೇಕು.

ನಮಗೆ ದಿನನಿತ್ಯ ಜೀವನದಲ್ಲಿ ಆಹಾರ ಧಾನ್ಯಗಳು ಎಷ್ಟು ಮುಖ್ಯವೋ, ತೋಟಗಾರಿಕಾ ಬೆಳೆಗಳೂ ಅಷ್ಟೇ ಮುಖ್ಯ. ಅಗತ್ಯ ಪೋಷಕಾಂಶಗಳನ್ನು ನೀಡುವುದರ ಜೊತೆ ಆಹಾರಪದ್ಧತಿಯನ್ನು ಆರೋಗ್ಯಕರವನ್ನಾಗಿಸುವಲ್ಲಿ ತೋಟಗಾರಿಕಾ ಬೆಳೆಗಳು ವಿಶಿಷ್ಟ ಪಾತ್ರ ವಹಿಸುತ್ತವೆ. 1991-92ರ ಸಮಯದಲ್ಲಿ ಭಾರತದ ತೋಟಗಾರಿಕಾ ಬೆಳೆಗಳ ಉತ್ಪಾದನೆಯು 106.44 ಮಿಲಿಯನ್‌ ಟನ್‌ ಗಳಷ್ಟಿತ್ತು. ನಂತರದಲ್ಲಿ ಕೈಗೊಂಡ ಸುಧಾರಣಾ ಕ್ರಮಗಳಿಂದ ಈ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2021-22ರ ಹೊತ್ತಿಗೆ 341.63 ಮಿಲಿಯನ್‌ ಟನ್‌ ಗಳಷ್ಟು ತೋಟಗಾರಿಕಾ ಉತ್ಪಾದನೆ ಸಾಧಿಸಲಾಗಿದೆ. ಹೆಚ್ಚು ಕಡಿಮೆ ಮೂರುದಶಕಗಳಲ್ಲಿ ಮೂರುಪಟ್ಟು ಹೆಚ್ಚಾಗಿದೆ ತೋಟಗಾರಿಕಾ ಉತ್ಪಾದನೆ. 2014 ರಲ್ಲಿ ದೇಶದಲ್ಲಿ ತೋಟಗಾರಿಕೆಯ ಸಮಗ್ರ ಅಭಿವೃದ್ಧಿಗಾಗಿ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (MIDH) ಪ್ರಾರಂಭಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!