ಅಮೃತಯಾತ್ರೆ: ಶಿಶು ಜನನ ವ್ಯವಸ್ಥೆಯಲ್ಲಿ ಸುಧಾರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಅಮೃತಯಾತ್ರೆಯ ಸಂದರ್ಭದಲ್ಲಿ ದೇಶವು ಆರೋಗ್ಯ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆ ಕಂಡಿದೆ. ಅವುಗಳಲ್ಲಿ ಶಿಶು ಜನನ ಸಂದರ್ಭದಲ್ಲಿ ಆಸ್ಪತ್ರೆಗಳ ಉಪಯೋಗ ಹೆಚ್ಚಾಗಿರುವುದೂ ಒಂದು. ಆಸ್ಪತ್ರೆಗಳಲ್ಲಿನ ಸುಧಾರಣೆಯು ಆಸ್ಪತ್ರೆಗಳ ಬಳಕೆಯನ್ನು ಹೆಚ್ಚಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಸ್ಪತ್ರೆ ವ್ಯವಸ್ಥೆಗಳನ್ನು ಬಳಸಿಕೊಂಡು ಶಿಶುಜನನ ಪ್ರಮಾಣವೂ ಹೆಚ್ಚಿದೆ.

1992-93ರ ಹೊತ್ತಿಗೆ ದೇಶದಲ್ಲಿ ಸಂಭವಿಸುತ್ತಿದ್ದ ಒಟ್ಟಾರೆ ಜನನ ಪ್ರಮಾಣದಲ್ಲಿ ಆಸ್ಪತ್ರೆ ವ್ಯವಸ್ಥೆಯನ್ನು ಬಳಸಿಕೊಂಡು ಆಗಿರುವ ಜನನಗಳ ಪ್ರಮಾಣ 26.1 ಶೇಕಡಾದಷ್ಟಿತ್ತು. ಆ ನಂತರದಲ್ಲಿ ಸರ್ಕಾರಿ ಆಸ್ಪತ್ರೆಗಳ ಸೌಲಭ್ಯ ಹೆಚ್ಚಿಸಿ, ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿದುದರ ಪರಿಣಾಮ ಆಸ್ಪತ್ರೆ ವ್ಯವಸ್ಥೆಯನ್ನು ಬಳಸಿಕೊಂಡು ಆಗಿರುವ ಜನನಗಳ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ. ಆಸ್ಪತ್ರೆಗಳಿಗೆ ವೈದ್ಯರ ನೇಮಕ. ದಾದಿಯರ ಸಂಖ್ಯೆ ಹೆಚ್ಚಿಸಿರುವುದು. ಹೆರಿಗೆ ಆಸ್ಪತ್ರೆಗಳ ಸ್ಥಾಪನೆ, ಔಷಧೀಯ ಸಾಮಗ್ರಿಗಳ ಸಮರ್ಪಕ ಪೂರೈಕೆ ಇತ್ಯಾದಿಗಳು ಈ ಹೆಚ್ಚಳಕ್ಕೆ ಕಾರಣವಾಗಿದೆ. 2019-21 ರಲ್ಲಿ ಒಟ್ಟಾರೆ ಜನನ ಪ್ರಮಾಣದಲ್ಲಿ ಆಸ್ಪತ್ರೆ ವ್ಯವಸ್ಥೆಯನ್ನು ಬಳಸಿಕೊಂಡು ಆಗಿರುವ ಜನನಗಳ ಪ್ರಮಾಣ ಶೇ. 88.6 ರಷ್ಟಿದೆ.

ಒಟ್ಟಾರೆ ಶಿಶು ಜನನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶದ ಸುಮಾರು 87 ಶೇ. ಜನನಗಳು ಮತ್ತು ನಗರ ಪ್ರದೇಶದ 94 ಶೇ. ಜನನಗಳು ಆಸ್ಪತ್ರೆ ವ್ಯವಸ್ಥೆಯನ್ನು ಬಳಸಿಕೊಂಡು ಆಗಿರುವ ಜನನಗಳಾಗಿವೆ. ಈ ಪ್ರಮಾಣವನ್ನು 100 ಶೇಕಡಾದಷ್ಟು ಸಾಧಿಸುವತ್ತ ಭಾರತ ದಾಪುಗಾಲಿಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!