ಅಮೃತಯಾತ್ರೆ: ಮತದಾರರ ಸಂಖ್ಯೆಯಲ್ಲಿ ಹೆಚ್ಚಳ, ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ ಭಾರತ ಯಶಸ್ವಿಯಾಗುತ್ತಿರೋ ಕಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಸ್ವಾತಂತ್ರ ಬಂದು 75 ವರ್ಷಗಳಾಗುತ್ತಿರೋ ಸಮಯದಲ್ಲಿ ಭಾರತವು ವಿಶ್ವದ ಅತಿ ದೊಡ್ಡ ಪ್ರಜಾ ಪ್ರಭುತ್ವ ವ್ಯವಸ್ಥೆಯಾಗಿ ಹೊರಹೊಮ್ಮಿರುವುದು ಕೂಡ ಹೆಮ್ಮೆಯ ಹೇಳಿಕೊಳ್ಳಬಹುದಾದ ಕಥೆಗಳಲ್ಲೊಂದು. ಪ್ರಜಾಪ್ರಭುತ್ವ ವ್ಯವಸ್ಥೆಯೊಂದರ ಯಶಸ್ಸು ನಿರ್ಧರಿತವಾಗುವುದು ಆ ದೇಶದ ಮತದಾರರ ಸಂಖ್ಯೆಯ ಆಧಾರದಲ್ಲಿ. ಭಾರತದಲ್ಲಿ ಕಳೆದ 75 ವರ್ಷಗಳಲ್ಲಿ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 3 ನೋಂದಾಯಿತ ಮತದಾರರ ಪೈಕಿ ಇಬ್ಬರು ತಮ್ಮ ಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ.

1951ರ ಹೊತ್ತಿನಲ್ಲಿ ಒಟ್ಟೂ ಅರ್ಹ ಮತದಾರರ ಪೈಕಿ ಕೇವಲ 48 ಶೇಕಡಾದಷ್ಟು ಜನರು ಮಾತ್ರ ನೋಂದಾಯಿತರಾಗಿದ್ದರು ಅಂದರೆ 36 ಕೋಟಿ ಒಟ್ಟೂ ಜನಸಂಖ್ಯೆಯಲ್ಲಿ 17 ಕೋಟಿಯಷ್ಟು ಮಾತ್ರ ನೋಂದಾಯಿತ ಮತದಾರರಿದ್ದರು. ಈ ಸಂಖ್ಯೆ 2014ರ ಹೊತ್ತಿಗೆ 69 ಶೇಕಡಾದಷ್ಟಾಗಿದೆ ಅಂದರೆ 121 ಕೋಟಿ ಜನಸಂಖ್ಯೆಯಲ್ಲಿ 83 ಕೋಟಿ ಮತದಾರರು ನೋಂದಾಯಿತರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 91.2 ಕೋಟಿ ಅರ್ಹ ಮತದಾರರಿದ್ದಾರೆ.

ಮತದಾನದ ಪ್ರಮಾಣವೂ ಏರಿಕೆಯಾಗಿದೆ. 1951ರಲ್ಲಿ ಕೇವಲ 46ಶೇಕಡಾದಷ್ಟು ಮತದಾನವಾಗಿತ್ತು. 2019ರಲ್ಲಿ 67 ಶೇಕಡಾದಷ್ಟು ಮತದಾನವಾಗಿದೆ. ಮತದಾನ ಕೇಂದ್ರಗಳ ಸಂಖ್ಯೆಯಲ್ಲಿಯೂ 5 ಪಟ್ಟು ಹೆಚ್ಚಳವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!