ಅಮೃತಯಾತ್ರೆ: ಐಐಟಿಗಳ ಮೂಲಕ ಜಾಗತಿಕವಾಗಿ ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಳ್ಳುತ್ತಿರುವ ಸಮಯದಲ್ಲಿ ದೇಶದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಒತ್ತು ಕೊಟ್ಟು ಜಗತ್ತಿಗೇ ತಂತ್ರಜ್ಞರನ್ನು ರಫ್ತು ಮಾಡುತ್ತಿರುವ ಹೆಮ್ಮೆ ಭಾರತದ್ದು. ಇಂದು ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. ಜಾಗತಿಕವಾಗಿ ದೊಡ್ಡ ದೊಡ್ಡ ಟೆಕ್‌ ದಿಗ್ಗಜ ಕಂಪನಿಗಳನ್ನು ಆಳುವ, ಅವುಗಳನ್ನು ಹುಟ್ಟುಹಾಕಿರುವ ಖ್ಯಾತಿಗೆ ಐಐಟಿಯನ್ಸ್‌ ಕಾರಣವಾಗಿದ್ದಾರೆ. ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ, ಇನ್ಫೋಸಿಸ್‌ ನಾರಾಯಣ ಮೂರ್ತಿ, ನಂದನ್‌ ನೀಲೇಕಣಿ, ಒಲಾ ಕ್ಯಾಬ್ಸ್‌ ಸಹಸಂಸ್ಥಾಪಕ ಭವೀಶ್‌ ಅಗರ್ವಾಲ್‌, ಬಿಲಿಯನೇರ್‌ ವಿನೋದ್‌ ಖೋಸ್ಲಾ ಇವರೆಲ್ಲ ಐಐಟಿಯಿಂದ ಶಿಕ್ಷಣ ಪಡೆದವರೇ.

ದೇಶದಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಒತ್ತು ಕೊಟ್ಟು ತಾಂತ್ರಿಕ ಕ್ಷೇತ್ರದಲ್ಲಿ ಔನ್ನತ್ಯ ಸಾಧಿಸುವ ಘನ ಉದ್ದೇಶದೊಂದಿಗೆ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (IIT) ಗಳನ್ನು ಸ್ಥಾಪಿಸಲಾಗಿದೆ. 1950ರಲ್ಲಿ ದೇಶದಲ್ಲಿ ಕೇವಲ ಮೂರು ಐಐಟಿ ಗಳಿದ್ದವು. ಇಂದು ದೇಶದ 21 ರಾಜ್ಯಗಳಲ್ಲಿ ಐಐಟಿ ಸ್ಥಾಪಿಸಲಾಗಿದೆ. 2020ರಲ್ಲಿ ಒಟ್ಟಾರೆ 23 ಐಐಟಿಗಳ ಮೂಲಕ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಕಳೆದೊಂದು ದಶಕದಲ್ಲಿಯೇ 8 ಐಐಟಿಗಳನ್ನು ಹೊಸದಾಗಿ ಸ್ಥಾಪಿಸಲಾಗಿದೆ. ಆಮೂಲಕ ವಿಶ್ವದರ್ಜೆಯ ತಂತ್ರಜ್ಞಾನ ಶಿಕ್ಷಣ ನೀಡಿ ಹೊಸ ತಲೆಮಾರಿನ ತಂತ್ರಜ್ಞರನ್ನು ಹುಟ್ಟುಹಾಕಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!