ಅಮೃತಯಾತ್ರೆ: ವಿದ್ಯುದೀಕರಣದಲ್ಲಿ ಹೊಸಮೈಲಿಗಲ್ಲು ಸಾಧಿಸಿದೆ ಭಾರತೀಯ ರೇಲ್ವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಸಂಪರ್ಕ ವ್ಯವಸ್ಥೆಯಲ್ಲಿ ರೇಲ್ವೇ ಕ್ರಾಂತಿಯು ವ್ಯಾಪಕ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಂತರಿಕವಾಗಿ ಸುಧಾರಣೆಗೊಳ್ಳುತ್ತ ಕಾಲಕ್ಕೆ ತಕ್ಕಂತೆ ಅಗತ್ಯವಿರುವ ಬದಲಾವಣೆಗಳನ್ನು ಅಳವಡಿಸಿಕೊಂಡು ಭಾರತೀಯ ರೇಲ್ವೇಯು ದೇಶದ ಸಂಪರ್ಕ-ಸಾರಿಗೆ ವ್ಯವಸ್ಥೆಯನ್ನು ಬಲಗೊಳಿಸುತ್ತ ಸಾಗಿದೆ. ಅಂತಹ ಬದಲಾವಣೆಗಳಲ್ಲಿ ರೇಲ್ವೇಯು ವಿದ್ಯುದೀಕರಣಗೊಂಡಿರುವುದೂ ಒಂದು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಲ್ಲಿ ಭಾರತೀಯ ರೇಲ್ವೆಯು ವಿದ್ಯುದೀಕರಣದಲ್ಲಿ ಮಹತ್ವದ ಮೈಲಿಗಲ್ಲಿ ಸಾಧಿಸಿದೆ.

ಕಳೆದ 8 ವರ್ಷಗಳಲ್ಲಿ 30,585 RKM(ರೂಟ್‌ ಕಿಲೊಮೀಟರ್)ಗಳಷ್ಟು ರೇಲ್ವೆ ವಿದ್ಯುದೀಕರಣಗೊಂಡಿವೆ. 1950ರ ಹೊತ್ತಲ್ಲಿ ಕೇವಲ 388 RKM(ಗಳಷ್ಟು ಮಾತ್ರ ವಿದ್ಯುದೀಕರಣಗೊಂಡಿತ್ತು. ಇದು 2022ರ ಹೊತ್ತಿಗೆ 52,247 RKMಗಳಿಗೆ ಏರಿಕೆಯಾಗಿದೆ. ಇಂಧನ ಕೊರತೆ, ಇಂಗಾಲ ಹೆಜ್ಜೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರೇಲ್ವೇ ವ್ಯವಸ್ಥೆಯ ವಿದ್ಯುದೀಕರಣಕ್ಕೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದೆ.

2030 ರ ಹೊತ್ತಿಗೆ ಶೂನ್ಯ ಇಂಗಾಲದ ಹೊರಸೂಸುವಿಕೆಯೊಂದಿಗೆ ಭಾರತೀಯ ರೈಲ್ವೆ ಪ್ರಪಂಚದ ಅತಿದೊಡ್ಡ ಹಸಿರು ರೇಲ್ವೆಯೆಂಬ ಖ್ಯಾತಿ ಗಳಿಸುವ ಗುರಿ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!