ಅಮೃತಯಾತ್ರೆ: ಭಾರತವನ್ನು ಬೆಸೆಯೋ ರಾಜ್ಯ ಹೆದ್ದಾರಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೃತಯಾತ್ರೆಯ ಸಂದರ್ಭದಲ್ಲಿ ರಸ್ತೆಗಳ ಸುಧಾರಣೆಯ ಜೊತೆ ದೇಶದ ಸಾರಿಗೆ – ಸಂಪರ್ಕ ವ್ಯವಸ್ಥೆಯಲ್ಲಿ ಅನೇಕ ಸುಧಾರಣೆಗಳಾಗಿವೆ. ಹೆದ್ದಾರಿಗಳ ನಿರ್ಮಾಣ ಕಳೆದೊಂದು ದಶಕದಿಂದ ಅತಿ ವೇಗವಾಗಿ ನಡೆಯುತ್ತಿದೆ. ರಾಜ್ಯ ರಾಜ್ಯಗಳನ್ನು ಬೆಸೆಯುವ ಮೂಲಕ ಸಮೃದ್ಧ ದೇಶ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ರಾಜ್ಯ ಹೆದ್ದಾರಿಗಳ ಪಾಲೂ ಇದರಲ್ಲಿದೆ.

ಭಾರತವು ಜಗತ್ತಿನಲ್ಲಿಯೇ ಎರಡನೇ ಅತಿದೊಡ್ಡ ರಸ್ತೆಗಳ ಜಾಲವನ್ನು ಹೊಂದಿದೆ. ಇವುಗಳ ಒಟ್ಟೂ ಉದ್ದ 63.72 ಲಕ್ಷ ಕಿಲೊಮೀಟರ್‌ ಗಳಷ್ಟಿದೆ. ಸ್ವಾತಂತ್ರ್ಯ ಬಂದು 21 ವರ್ಷಗಳಷ್ಟಾಗುವ ಹೊತ್ತಿಗೆ ದೇಶದಲ್ಲಿ 56,765 ಕಿಲೋಮೀಟರ್‌ ರಾಜ್ಯ ಹೆದ್ದಾರಿಗಳಿದ್ದವು. ಇವುಗಳ ಉದ್ದ 2021ರ ಹೊತ್ತಿಗೆ 1,71,039 ಕಿಲೊಮೀಟರ್‌ ಗಳಷ್ಟಾಗಿದೆ. ದಿನದಿಂದ ದಿನಕ್ಕೆ ಹೆದ್ದಾರಿಗಳ ನಿರ್ಮಾಣ ಹೆಚ್ಚುತ್ತಿದ್ದು ಆರ್ಥಿಕ ಬೆಳವಣಿಗೆಯತ್ತ ಲಕ್ಷ್ಯ ವಹಿಸಿರುವುದರ ಜೊತೆ ಸಂಪರ್ಕವನ್ನು ಸರಾಗ ಗೊಳಿಸುವತ್ತವೂ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗಿದೆ. ಸಾಮಾಜಿಕ-ಆರ್ಥಿಕ ಏಕೀಕರಣ ಮತ್ತು ದೇಶದ ಅಭಿವೃದ್ಧಿಯಲ್ಲಿ ರಾಜ್ಯ ಹೆದ್ದಾರಿಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!