Friday, August 19, 2022

Latest Posts

ಅಮುಲ್ ಬೆನ್ನಲ್ಲೇ ಮದರ್​ ಡೈರಿಯಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಮುಲ್ ಹಾಲಿನ ಬೆಲೆಯಲ್ಲಿ 2 ರೂಪಾಯಿ ಏರಿಕೆ ಮಾಡಿ ಘೋಷಣೆ ಬೆನ್ನಲ್ಲೇ ಇದೀಗ ಮದರ್​ ಡೈರಿ ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿ ಆದೇಶ ಹೊರಹಾಕಿದೆ.
ಪ್ರಮುಖವಾಗಿ ದೆಹಲಿ-ಎನ್​ಸಿಆರ್​​ ಹಾಗೂ ಇತರೆ ನಗರಗಳಲ್ಲಿ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಲಾಗಿದ್ದು, ಪ್ರತಿ ಲೀಟರ್​​ಗೆ 2ರೂ ಏರಿಕೆಯಾಗಲಿದೆ. ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೊಳ್ಳಲಿದೆ.
ಕಳೆದ ಒಂದು ವರ್ಷದಿಂದ ಹಾಲು ಖರೀದಿಯಲ್ಲಿ ಶೇ 8ರಿಂದ 10ರಷ್ಟು ಏರಿಕೆಯಾಗಿದ್ದು, ಇದರ ಜತೆಗೆ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಉತ್ತರ ಪ್ರದೇಶ, ಮುಂಬೈ, ನಾಗ್ಪುರ್​ ಮತ್ತು ಕೋಲ್ಕತ್ತಾ ಸೇರಿದಂತೆ 11 ನಗರಗಳಲ್ಲಿ ಈ ಪರಿಷ್ಕೃತ ದರ ಜಾರಿಗೊಳ್ಳಲಿದೆ. ದೇಶದ 100 ನಗರಗಳಲ್ಲಿ ಮದರ್​ ಡೈರಿ ಹಾಲು ಲಭ್ಯವಾಗುತ್ತಿದ್ದು, ಪ್ರತಿದಿನ ದೆಹಲಿ-ಎನ್​​ಸಿಆರ್​​ನಲ್ಲಿ 30 ಲಕ್ಷ ಲೀಟರ್​ ಹಾಲು ಮಾರಾಟ ಮಾಡುತ್ತಿದೆ. ದೇಶದಲ್ಲಿ ಪ್ರತಿ ಲೀಟರ್ ಮದರ್​​ ಡೈರಿ​​ ಹಾಲಿನ ಬೆಲೆ 42 ರೂ. ಆಗಿದ್ದು, ಇದೀಗ 44 ರೂ. ಆಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!