28 ವರ್ಷದ ಪ್ರಿಯಕರನ ವರಿಸಲು ಗಡಿ ದಾಟಿ ಬಂದಳು 83ರ ವೃದ್ಧೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರೀತಿಗೆ ಕಣ್ಣಿಲ್ಲ ಎಂಬ ಮಾತು ನಿಜ. ಎಲ್ಲವನ್ನೂ ಮೀರಿ ಬೆಳೆಯುವ ಶಕ್ತಿಎಂದರೆ ಅದು ಪ್ರೀತಿ. ಎಷ್ಟೆಂದರೆ ಪ್ರೀತಿಗೆ ರಾಜ್ಯ, ದೇಶಗಳ ಗಡಿಯನ್ನು ದಾಟಿ ಬರುವವರು ಇದ್ದಾರೆ.

ಇದೀಗ ಇಂತಹ ಪ್ರೇಮಕಥೆಯೊಂದು ಸುದ್ದಿಯಾಗಿದೆ. 83 ವರ್ಷದ ಪೋಲಿಷ್‌ ಮಹಿಳೆ ತನ್ನ 28 ವರ್ಷದ ಗೆಳೆಯನನ್ನು ಮದುವೆಯಾಗಲು ತನ್ನ ದೇಶದಿಂದ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾಳೆ.

ಪೋಲಿಷ್‌ ನಿವಾಸಿಯಾಗಿರುವ ವೃದ್ಧೆ ಬ್ರೋಮಾ ತನ್ನ 28 ವರ್ಷದ ಗೆಳೆಯ ಹಫೀಜ್ ನದೀಮ್ ನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಬಂದಿದ್ದಳು. ಕಳೆದ ವರ್ಷ ನವೆಂಬರ್ 1 ರಂದು ಹಫ್ಜಾಬಾದ್‌ನ ಕಾಜಿಪುರದಲ್ಲಿ ಇಬ್ಬರೂ ವಿವಾಹವಾಗಿದ್ದರು. ಈ ವರ್ಷ ದಂಪತಿಗಳು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ.

ಫೇಸ್ ಬುಕ್‌ನಲ್ಲಿ ಪೋಲಿಷ್ ಮಹಿಳೆ ಮತ್ತು ಪಾಕಿಸ್ತಾನಿ ಯುವಕನ ಮೊದಲ ಭೇಟಿಯಾಗಿದೆ. ಕ್ರಮೇಣ ಇವರಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿದೆ. ಇಬ್ಬರೂ ಪರಸ್ಪರ ಮದುವೆಯಾಗುವ ಭರವಸೆ ನೀಡಿದ್ದರು. ಅದನ್ನು ಪೂರೈಸಲು ಮಹಿಳೆ ಪಾಕಿಸ್ತಾನಕ್ಕೆ ಬಂದು ಅಲ್ಲೇ ಇಬ್ಬರೂ ವಿವಾಹವಾದರು.

ಅವರು ತಮ್ಮ ನಡುವಿನ ವಯಸ್ಸಿನ ವ್ಯತ್ಯಾಸವನ್ನು ಲೆಕ್ಕಿಸದೆ ತಮ್ಮ ಜೀವನದುದ್ದಕ್ಕೂ ಪರಸ್ಪರ ಬದುಕಲು ನಿರ್ಧರಿಸಿದರು. ಮಹಿಳೆಯ ಪತಿ ಹಫೀಜ್ ನದೀಮ್ ಪಾಕಿಸ್ತಾನದ ಕಾಜಿಪುರ ನಿವಾಸಿಯಾಗಿದ್ದು, ಆಟೋ ಮೆಕ್ಯಾನಿಕ್ ಆಗಿದ್ದಾರೆ. ಇವರ ನಡುವೆ 60 ವರ್ಷಗಳ ವಯಸ್ಸಿನ ಅಂತರವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!