ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜೀವದ ಹಂಗು ತೊರೆದು ಬಿಲ್ಡಿಂಗ್’ನಿಂದ ಬಿಲ್ಡಿಂಗ್’ಗೆ ಹಾರುವ ಸಾಹಸಿ: ವಿಡಿಯೋ ವೈರಲ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಲ್ಲೊಬ್ಬ ಯುವಕ ಇದ್ದಾನೆ. ಈತನಿಗೆ ಜೀವದ ಮೇಲೆ ಆಸೆಯೇ ಇಲ್ಲ ಎನಿಸುತ್ತದೆ. ಯಾವುದೇ ಮುಂಜಾಗೃತಾ ಕ್ರಮಗಳಿಲ್ಲದೇ ಬಿಲ್ಡಿಂಗ್ ನಿಂದ ಬಿಲ್ಡಿಂಗ್ ಗೆ ಹಾರಿ ನೆಟ್ಟಿಗರನ್ನು ದಂಗಾಗಿಸಿದ್ದಾನೆ.

ಹೌದು.. ಈತನ ಫ್ರೆಂಚ್ ಮೂಲದ ಬೆನ್ ಕ್ಯಾಂಟೆ. ರೂಫ್ ರಾಟ್ ಸ್ಟಂಟ್ಸ್ ಮಾಡುವುದರಲ್ಲಿ ಎತ್ತಿದ ಕೈ. ಯಾವುದೇ ಸುರಕ್ಷತಾ ಸಾಧನಗಳನ್ನು ಬಳಸದೆ ಅಪಾಯಕಾರಿ ಬಿಲ್ಡಿಂಗ್ ನಲ್ಲಿ ತನ್ನ ಸಾಹಸ ಪ್ರದರ್ಶನ ಮಾಡಿದ್ದಾನೆ.

ದೊಡ್ಡ ದೊಡ್ಡ ಬಿಲ್ಡಿಂಗ್ ಗಳಲ್ಲಿ ಎತ್ತರದಿಂದ ಬೀಳುವಂತೆ ನಟಿಸಿಸಿ ಎಂಥವರನ್ನೂ ಒಮ್ಮೆ ಬೆಚ್ಚಿ ಬೀಳಿಸುತ್ತಾನೆ. ಅಷ್ಟೇ ಅಲ್ಲ, ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಲೀಲಾಜಾಲವಾಗಿ ಜಂಪ್ ಮಾಡುತ್ತಾನೆ. ಇಂತಹ ಸಾಹಸ ಮಾಡಲು ಬಹಳ ಪ್ರಾಕ್ಟೀಸ್ ಬೇಕು. ಇದೊಂದು  ಅಪಾಯಕಾರಿ ಸಾಹಸವೆಂದರೆ ತಪ್ಪಾಗಲಾರು.

ಸದ್ಯ ಈತ ತನ್ನ ಸಾಹಸದ ವಿಡಿಯೊವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋಗಳು ಯುವಕರಲ್ಲಿ ಬಹಳ ಕ್ರೇಜ್ ಹುಟ್ಟುಹಾಕಿದೆ. ಸದ್ಯ ಬೆನ್ ಕ್ಯಾಂಟೆ ಸ್ಟಾರ್ ಆಗಿಬಿಟ್ಟಿದ್ದಾರೆ.

ಬೆನ್ ಕ್ಯಾಂಟೆ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇದಾವುದಕ್ಕೂ ಬೆನ್ ಕ್ಯಾಂಟೆ ತಲೆಕಡೆಸಿಕೊಳ್ಳದೇ ತನ್ನ ಸಾಹಸ ಮುಂದುವರೆಸಿದ್ದಾನೆ.

https://www.instagram.com/p/CE9kxi7K9Wf/?utm_source=ig_web_copy_link

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss