1857ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯ ಮಾಡಿದ್ದ ಆಫ್ರಿಕನ್ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯುದ್ಧದಲ್ಲಿ ಹೋರಾಡಿದ ವೀರ ಮಹಿಳೆಯರ ಕೊಡುಗೆಗಳನ್ನು ಸ್ಮರಿಸದೆ 1857 ರ ದಂಗೆಯ ಬಗ್ಗೆ ಮಾತನಾಡುವುದು ಅಷ್ಟು ಸಮಂಜಸವಲ್ಲ. ಯುದ್ಧದ ಸಂದರ್ಭದಲ್ಲಿ ಮಹಿಳೆಯರ ಬಗ್ಗೆ ಯೋಚಿಸಿದಾಗ, ರಾಣಿ ಲಕ್ಷ್ಮೀಬಾಯಿ ಮತ್ತು ಬೇಗಂ ಹಜರತ್ ಮೆಹಲ್ ಅವರ ಹೆಸರುಗಳು ಮೊದಲು ನೆನಪಿಗೆ ಬರುತ್ತವೆ. ಬರೀ ರಾಜವಂಶದವರು ಮಾತ್ರವಲ್ಲದೆ ಸಾಮಾನ್ಯ ಮಹಿಳೆಯರೂ ಕೂಡ ಯುದ್ಧಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.

ಕೇವಲ ಭಾರತದ ಮಹಿಳೆಯರಷ್ಟೇ ಅಲ್ಲದೆ ವಿದೇಶೀ ಮಹಿಳೆಯರು ಕೂಡ ಬ್ರಿಟೀಷರ ವಿರುದ್ಧ ಹೋರಾಡುವಲ್ಲಿ ತಮ್ಮ ಕೈಲಾದ ಸೇವೆ ಸಲ್ಲಿಸಿದ್ದಾರೆ. ಅವರಲ್ಲಿ ಈ ಹೆಸರಿಲ್ಲದೆ ಆಫ್ರಿಕನ್‌ ಮಹಿಳೆ ಕೂಡ ಸೇರಿದ್ದಾರೆ. 1910 ರಲ್ಲಿ ವಿಲಿಯಂ ಫೋರ್ಬ್ಸ್-ಮಿಚೆಲ್ ಅವರು ಪ್ರಕಟಿಸಿದ 1857-59ರ ದಂಗೆಯಲ್ಲಿ  ಆಫ್ರಿಕನ್ ಆಗಿದ್ದ ಈ ಹೆಸರಿಸದ ಮಹಿಳೆಯ ಬಗ್ಗೆ ಸಂಕ್ಷಿಪ್ತವಾಗಿ ಬರೆದಿದ್ದಾರೆ. ಒಮ್ಮೆ ಲಕ್ನೋದ ಸಿಕಂದರಾ ಬಾಗ್‌ನಲ್ಲಿ ಯುದ್ಧ ಮುಗಿದ ನಂತರ, ಕೆಲವು ಬ್ರಿಟಿಷ್ ಪಡೆಗಳು ದೈತ್ಯ ಪೀಪಲ್ ಮರದ ಕೆಳಗೆ ವಿಶ್ರಾಂತಿ ಪಡೆಯುವ ವೇಳೆ ಅವರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಾರಣ ಮೇಲಿನಿಂದ ಯಾರೋ ಗುಂಡು ಹಾರಿಸಿರುವುದು ಎಂದು ಗೊತ್ತಾಗಿದೆ.

ಅವರಲ್ಲಿ ಒಬ್ಬ ಸೈನಿಕ ತನ್ನ ರೈಫಲ್‌ನಿಂದ ದಟ್ಟವಾದ ಎಲೆಗಳು ಮತ್ತು ಕೊಂಬೆಗಳತ್ತ ಗುಂಡು ಹಾರಿಸಿದ ಕೂಡಲೇ ದೇಹವೊಂದು ದೊಪ್ಪೆಂದು ಕೆಳಗೆ ಬಿದ್ದಿತು. “ಬಿಗಿಯಾದ ಕೆಂಪು ಜಾಕೆಟ್” ಮತ್ತು “ಗುಲಾಬಿ ಬಣ್ಣದ ರೇಷ್ಮೆ ಪ್ಯಾಂಟ್” ಅನ್ನು ಧರಿಸಿದ್ದರು ಎಂದು ಫೋರ್ಬ್ಸ್-ಮಿಚೆಲ್ ಬರೆಯುತ್ತಾರೆ. ಜಾಕೆಟ್ ತೆಗೆದು ನೋಡಿದಾಗಲೇ ತಿಳಿದದ್ದು ಅದು ಮಹಿಳೆಯ ಮೃತದೇಹ ಎಂದು. ಸೈನಿಕನು ಅವನ ಕಾರ್ಯಗಳ ಬಗ್ಗೆ ವಿಷಾದಿಸಿದನು “ಆಕೆ ಮಹಿಳೆ ಎಂದು ನನಗೆ ತಿಳಿದಿದ್ದರೆ, ನಾನು ಅವಳಿಗೆ ಹಾನಿ ಮಾಡುವುದಕ್ಕಿಂತ ಸಾವಿರ ಸೈನಿಕರನ್ನು ಸಾಯಿಸುತ್ತಿದ್ದೆ ಎಂದನಂತೆ”.

ಈ ಆಫ್ರಿಕನ್ ಮಹಿಳೆ ಭಾರತಕ್ಕೆ ಬಂದಿದ್ದಾದರೂ ಹೇಗೆ?
ಗಣನೀಯ ಸಂಖ್ಯೆಯ ಆಫ್ರಿಕನ್ ಗುಲಾಮರನ್ನು ಅರಬ್ ವ್ಯಾಪಾರಿಗಳು ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದರು. ಇದು ಶತಮಾನಗಳಿಂದ ನಡೆಯುತ್ತಿತ್ತು, ಅಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಪೂರ್ವ ಆಫ್ರಿಕಾದಿಂದ ಕರೆತರಲಾಗುತ್ತಿತ್ತು. ಆದ್ದರಿಂದ ನಮ್ಮ ಹೆಸರಿಲ್ಲದ ಮಹಿಳಾ ಸೈನಿಕರು ಆಫ್ರಿಕಾದಿಂದ ನೇರವಾಗಿ ಬಂದಿರಬಹುದು ಅಥವಾ ಆಫ್ರಿಕನ್ ಪೋಷಕರಿಗೆ ಭಾರತದಲ್ಲಿ ಜನಿಸಿರಬಹುದು ಎಂದು ಹೇಳಲಾಗುತ್ತದೆ.

ವಾಜಿದ್ ಅಲಿ ಷಾ ನೇತೃತ್ವದಲ್ಲಿ ಅವಧ್ ಸೈನ್ಯವನ್ನು ಬ್ರಿಟಿಷ್ ಬರಹಗಾರರು ಅವರನ್ನು ‘ಅಮೆಜಾನ್‌ಗಳು’ ಎಂದು ವಿವರಿಸಿದ್ದಾರೆ.  ಈ ಹೆಸರಿಸದ ಮಹಿಳೆ ಬಹುತೇಕ ಖಚಿತವಾಗಿ ಈ ಗುಂಪಿನ ಭಾಗವಾಗಿರಬಹುದು. ರಾಜನ ಸೈನ್ಯದಲ್ಲಿ ಗುಲಾಬಿ ಪುಲ್ಟನ್ ಉಲ್ಲೇಖವಿದೆ, ಮತ್ತು ಇದು ಅಂಗರಕ್ಷಕನ ಹೆಸರಾಗಿರಬಹುದು. ಇದು ಪ್ಲಟೂನ್‌ಗೆ ಸಾಕಷ್ಟು ಸ್ತ್ರೀಲಿಂಗ ಹೆಸರು, ಮತ್ತು ಅವಳು ಧರಿಸಿದ್ದ ಉಡುಪು ಕೂಡ ಇದಕ್ಕೆ ಹೋಲುವಂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!